ಗುರುವಾರ , ಆಗಸ್ಟ್ 5, 2021
28 °C

ದೂರವಾಣಿ ಕರೆ ಮಾಡಿ ಹರಿಯಾಣ ಸಚಿವರ ಆರೋಗ್ಯ ವಿಚಾರಿಸಿದ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ಹರಿಯಾಣದ ಗೃಹ ಸಚಿವ ಅನಿಲ್‌ ವಿಜ್‌

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಗೃಹ ಸಚಿವ ಅನಿಲ್‌ ವಿಜ್‌ ಅವರಿಗೆ ಸೋಮವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ವಿಚಾರಿಸಿದರು.

ಅನಿಲ್‌ ಅವರು ತೊಡೆ ಮೂಳೆ ಮುರಿತಕ್ಕಾಗಿ ಮೊಹಾಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. 

‘ಪ್ರಧಾನಿ ಕರೆ ಬಳಿಕ ನನ್ನ ಎಲ್ಲಾ ನೋವು ಮಾಯವಾಗಿದೆ’ ಎಂದು ಸಚಿವ ಅನಿಲ್‌ ಟ್ವೀಟ್‌ ಮಾಡಿದ್ದಾರೆ. ‘ನನ್ನಂಥ ಸಾಮಾನ್ಯ ಕಾರ್ಯಕರ್ತನ ಬಗೆಗೂ ನೀವು ಇಷ್ಟೊಂದು ಕಾಳಜಿ ವಹಿಸಿದ್ದೀರಿ. ಇದಕ್ಕಾಗಿ ನಾನು ಕೃತಜ್ಞ’ ಎಂದಿದ್ದಾರೆ.

ಸುಮಾರು ಐದು ನಿಮಿಷ ಅವರು ಮಾತನಾಡಿದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು ಎಂದು ನಂತರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು