ಸೋಮವಾರ, ಆಗಸ್ಟ್ 8, 2022
21 °C

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಟಿಎಂಸಿ ಶಾಸಕರು ಬಿಜೆಪಿ ಸೇರುತ್ತಾರೆ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆರಾಂಪೋರ್ (ಪಶ್ಚಿಮ ಬಂಗಾಳ): ಮೇ 23ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿ, ಪಶ್ಚಿಮ ಬಂಗಾಳದಲ್ಲಿರುವ ಟಿಎಂಸಿ ಶಾಸಕರು ಬಿಜೆಪಿ ಸೇರಲು ಹಾತೊರೆಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಸೆರಾಂಪೋರ್‌ನಲ್ಲಿ ಸೋಮವಾರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, 'ದೀದಿ, ಮೇ23ಕ್ಕೆ ಫಲಿತಾಂಶ ಪ್ರಕಟವಾದ ನಂತರ ಎಲ್ಲೆಡೆ ಕಮಲ ಅರಳುತ್ತದೆ. ನಿಮ್ಮ ಶಾಸಕರೇ ನಿಮ್ಮನ್ನು ತೊರೆದು ಹೋಗುತ್ತಾರೆ.ಈಗಲೂ ನಿಮ್ಮ 40 ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ' ಎಂದಿದ್ದಾರೆ.

ಮಣ್ಣು ಮತ್ತು ಕಲ್ಲಿನಿಂದ ಮಾಡಿಗ ರಸಗುಲ್ಲಾವನ್ನು ನನಗೆ ಕೊಡಬೇಕೆಂದು ದೀದಿ ಬಯಸಿದ್ದಾರೆ. ಬಂಗಾಳದ ಮಣ್ಣಿನಲ್ಲಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾವಂದ, ಜೆ.ಸಿ ಬೋಸ್, ನೇತಾಜಿ , ಎಸ್‍ಪಿ ಮುಖರ್ಜಿ ಮೊದಲಾದವರ ಸತ್ವ ಇದೆ. ಆ ಮಣ್ಣಿನಿಂದ ಮಾಡಿದ ರಸಗುಲ್ಲಾ ಸಿಕ್ಕಿದರೆ  ಅದು ನನ್ನ ಪಾಲಿಗೆ ಪ್ರಸಾದ ಎಂದಿದ್ದಾರೆ ಮೋದಿ.

ಈ ಹಿಂದೆ ಸ್ಪೀಡ್ ಬ್ರೇಕರ್ ದೀದಿ ಎಂದು ಮಮತಾ ವಿರುದ್ಧ ವಾಗ್ದಾಳಿ ಮಾಡಿದ್ದ ಮೋದಿ, ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ

ಮೋದಿಯವರು ತಾಯಿಗೆ ಗೌರವ ಕೊಡುವುದಿಲ್ಲ, ದೇಶವನ್ನು ಗೌರವಿಸುತ್ತಾರಾ?: ಮಮತಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು