ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ರಜೆ ತಗೆದುಕೊಳ್ಳುವುದಿಲ್ಲ, ದಿನದ 18 ಗಂಟೆ ಕೆಲಸ ಮಾಡುತ್ತಾರೆ: ಅಮಿತ್ ಶಾ

Last Updated 28 ಏಪ್ರಿಲ್ 2019, 7:03 IST
ಅಕ್ಷರ ಗಾತ್ರ

ಪಲಾಮು (ಜಾರ್ಖಂಡ್): ಪ್ರಧಾನಿ ನರೇಂದ್ರ ಮೋದಿಯವರು ದಿನದ 18 ಗಂಟೆ ಕೆಲಸ ಮಾಡುತ್ತಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡು ಮೂರು ತಿಂಗಳಿಗೊಮ್ಮೆ ರಜಾಕಾಲ ಕಳೆಯಲು ಹೋಗುತ್ತಾರೆಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಶನಿವಾರ ಜಾರ್ಖಂಡ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ನಾನು ಕಳೆದ 20 ವರ್ಷಗಳಿಂದ ಮೋದಿ ಜತೆ ಕೆಲಸ ಮಾಡುತ್ತಿದ್ದೇನೆ.ಅವರು ಇಲ್ಲಿಯವರೆಗೆ ಕೆಲಸ ಮಾಡುವಾಗ ರಜೆ ತೆಗೆದುಕೊಂಡಿಲ್ಲ.ಆದರೆ ರಾಹುಲ್ ಬಾಬಾ, ತಮ್ಮ ಪಕ್ಷದ ಕಾರ್ಯಕರ್ತರನ್ನು, ನೇತಾರರನ್ನು ಅಷ್ಟೇ ಯಾಕೆ ಅವರ ಅಮ್ಮನನ್ನು ಬಿಟ್ಟು ಎರಡು ಮೂರು ತಿಂಗಳಿಗೊಮ್ಮೆ ವಿದೇಶದಲ್ಲಿ ರಜಾಕಾಲ ಕಳೆಯಲು ಹೋಗುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ಅಧಿಕಾರವಧಿಯಲ್ಲಿ ಅವರು ಯಾವತ್ತೂ ಪಾಕಿಸ್ತಾನಕ್ಕೆ ತಿರುಗೇಟು ನೀಡಿರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಭಾರತದ ಯೋಧ ಹೇಮರಾಜ್ ಅವರ ದೇಹವನ್ನು ಪಾಕ್ ಯೋಧರು ಛಿದ್ರಗೊಳಿಸಿದ್ದ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ಮನಸ್ಸಿಗೆ ತುಂಬಾ ನೋವಾಗುತ್ತದೆ.ಹೀಗಿರುವಾಗಲೂ ಯುಪಿಎ ಏನೂ ಮಾಡಲಿಲ್ಲ.ಎಂದಿನಂತೆ ಮನಮೋಹನ್ ಸಿಂಗ್ ಮೌನವಾಗಿದ್ದರು.
ಏತನ್ಮಧ್ಯೆ, ಕಾಶ್ಮೀರ ಕಣಿವೆಯಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ ಶಾ.

ಜಾರ್ಖಂಡ್‍ನಲ್ಲಿರುವ ಕಾಂಗ್ರೆಸ್ ಮಿತ್ರಪಕ್ಷಗಳಾದ ಜೆಎಂಎಂ ಮತ್ತು ಆರ್‌ಜೆಡಿ ಇದಕ್ಕಿಂತ ಹೊರತಾಗಿಲ್ಲ.

ಕಾಂಗ್ರೆಸ್ ಕಾಶ್ಮೀರದಲ್ಲಿ ಆರ್ಟಿಕಲ್ 370 ನ್ನು ರದ್ದು ಮಾಡಲು ಬಯಸುವುದಿಲ್ಲ. ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾದಳ ಈ ವಿಷಯದಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿವೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಅವರು ತಪ್ಪಾದ ದಿಶೆಯಲ್ಲಿದ್ದಾರೆ.

ನಾನು ಕಳೆದ ನಾಲ್ಕೈದು ತಿಂಗಳುಗಳಲ್ಲಿ ದೇಶದಾದ್ಯಂತ ರಾಜಕೀಯ ರ‍್ಯಾಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದೇನೆ.ಅಲ್ಲಿ ಎಲ್ಲಾ ಕಡೆ ನನಗೆ ಮೋದಿ-ಮೋದಿ ಎಂಬ ಜೈಕಾರವೇ ಕೇಳಿದೆ. ಭಾರತದ ಜನರು ಅವಿರೋಧವಾಗಿ ಮೋದಿಯನ್ನು ಆಯ್ಕೆ ಮಾಡಿದ್ದು ಅವರು ಅದೇ ನಿರ್ಧಾರದಲ್ಲಿ ಅಚಲವಾಗಿ ನಿಲ್ಲಲಿದ್ದಾರೆ ಎಂದು ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT