ಮಲಯಾಳಂ ಕವಿ ಚಾಕೊ

7

ಮಲಯಾಳಂ ಕವಿ ಚಾಕೊ

Published:
Updated:
Deccan Herald

ಕೊಚ್ಚಿ: ಮಲಯಾಳಂನ ಹೆಸರಾಂತ ಕವಿ ಚೆಮ್ಮನಮ್‌ ಚಾಕೊ (92) ಇಲ್ಲಿನ ಕಾಕ್ಕನಾಡ ನಿವಾಸದಲ್ಲಿ ಬುಧವಾರ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಕೇರಳದ ಸಮಕಾಲೀನ ಸಾಮಾಜಿಕ– ರಾಜಕೀಯ ವಿಚಾರಗಳಿಗೆ ಚಾಕೊ ತಮ್ಮ ಕವಿತೆಗಳ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು.

ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಜಯನ್‌ ಪ್ರಶಸ್ತಿ, ಕುಂಜನ್‌ ನಂಬಿಯಾರ್‌ ಕವಿತಾ ಪುರಸ್ಕಾರ ಸೇರಿದಂತೆ ಹಲವು ಗೌರವಗಳಿಗೆ ಅವರು ಪಾತ್ರರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !