ಮಂಗಳವಾರ, ಏಪ್ರಿಲ್ 20, 2021
30 °C

ವಿದೇಶಿ ಜೈಲುಗಳಲ್ಲಿ 8,189 ಭಾರತೀಯರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 8,189 ಭಾರತೀಯರು ವಿದೇಶಗಳ ಜೈಲುಗಳಲ್ಲಿ ಇದ್ದಾರೆ. ಅವರಲ್ಲಿ ವಿಚಾರಣಾಧೀನ ಕೈದಿಗಳೂ ಸೇರಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ. ಮುರಳೀಧರನ್‌ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ. 

ಈ ಪೈಕಿ ಅತಿ ಹೆಚ್ಚು ಮಂದಿ ಸೌದಿ ಅರೇಬಿಯಾದ ಜೈಲುಗಳಲ್ಲಿದ್ದಾರೆ. ಅಲ್ಲಿನ ಜೈಲುಗಳಲ್ಲಿ ಇರುವ ಭಾರತೀಯರ ಸಂಖ್ಯೆ 1,811; ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ 1,392 ಮತ್ತು ನೇಪಾಳದಲ್ಲಿ 1,160 ಭಾರತೀಯರು ಸೆರೆಮನೆಯಲ್ಲಿದ್ದಾರೆ. 

ಕೆಲವು ದೇಶಗಳಲ್ಲಿ ಕಟ್ಟುನಿಟ್ಟಿನ ಖಾಸಗಿತನ ರಕ್ಷಣಾ ಕಾನೂನುಗಳಿವೆ. ಹಾಗಾಗಿ, ಅಲ್ಲಿನ ಸಂಸ್ಥೆಗಳು ಕೈದಿಗಳ ಮಾಹಿತಿ ಬಹಿರಂಗಪಡಿಸುವುದಿಲ್ಲ. ಕೈದಿ ಒಪ್ಪಿಗೆ ಕೊಟ್ಟರೆ ಮಾತ್ರ ಮಾಹಿತಿಯನ್ನು ಬಹಿರಂಗಪಡಿಸುತ್ತವೆ ಎಂದು ಮುರಳೀಧರನ್‌ ತಿಳಿಸಿದರು. 

2016ರಿಂದ ಈವರೆಗೆ, ಕೊಲ್ಲಿ ದೇಶಗಳಲ್ಲಿ 3,087 ಭಾರತೀಯರಿಗೆ ಕ್ಷಮಾದಾನ ಅಥವಾ ಶಿಕ್ಷೆಯಲ್ಲಿ ವಿನಾಯಿತಿ ದೊರೆತಿದೆ ಎಂದೂ ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.