ನವದೆಹಲಿ: ಲಡಾಖ್ ಭಾಗದಲ್ಲಿ ಭಾರತದ ಭೂ ಪ್ರದೇಶವನ್ನು ಚೀನಾ ವಶಕ್ಕೆ ಪಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಈ ವಿಷಯದಲ್ಲಿ ಪ್ರಧಾನಿ ಮೌನವಾಗಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

‘ಚೀನಿಯರು ಲಡಾಖ್‌ನಲ್ಲಿ ಗಡಿಯೊಳಗೆ ನುಗ್ಗಿ ನಮಗೆ ಸೇರಿದ ಭೂ ಪ್ರದೇಶವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಈ ವಿಷಯದಲ್ಲಿ ಪ್ರಧಾನಿ ಸಂಪೂರ್ಣವಾಗಿ ಮೌನ ಮೆರೆದಿದ್ದಾರೆ. ಅವರು ಈ ವಿಚಾರದಿಂದ ದೂರಸರಿದಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಉಭಯ ದೇಶದ ಮಿಲಿಟರಿ ಮಾತುಕತೆ ವೇಳೆ ಚೀನಾದ ಬಿಗಿ ನಿಲುವನ್ನು ಮತ್ತು ಗಲ್ವಾನ್ ಕಣಿವೆ ಮತ್ತು ಪಾಂಗಾಂಗ್ ತ್ಸೊದ ಕೆಲ ಭಾಗಗಳನ್ನು ತನಗೆ ಸೇರಿದೆ ಚೀನಾ ಪ್ರತಿಪಾದಿಸಿದೆ ಎನ್ನುವ ಪತ್ರಿಕಾ ವರದಿಯೊಂದನ್ನು ಅವರು ಟ್ಯಾಗ್ ಮಾಡಿದ್ದಾರೆ.

ಗಡಿ ವಿಷಯದಲ್ಲಿ ಏನು ನಡೆದಿದೆ ಮತ್ತು ಲಡಾಕ್‌ನ ಕೆಲ ಭಾಗಗಳನ್ನು ಚೀನಾ ಅತಿಕ್ರಮಣ ಮಾಡಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.