ಕೇರಳ, ತಮಿಳುನಾಡಿನಲ್ಲಿ ಮಳೆ: ಕಟ್ಟೆಚ್ಚರ

7

ಕೇರಳ, ತಮಿಳುನಾಡಿನಲ್ಲಿ ಮಳೆ: ಕಟ್ಟೆಚ್ಚರ

Published:
Updated:

ಚೆನ್ನೈ/ ತಿರುವನಂತಪುರ: ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಭಾರಿ ಮಳೆಯಾಗಿದೆ.

ಇದರಿಂದಾಗಿ ತಮಿಳುನಾಡಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕನ್ಯಾಕುಮಾರಿಯಿಂದ ಮೀನುಗಾರಿಕೆಗೆ ತೆರಳಿದ್ದ ಒಂದು ಸಾವಿರ ಮೀನುಗಾರರು ಪತ್ತೆಯಾಗಿಲ್ಲ. ಭಾನುವಾರ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುದುಚೇರಿಯಲ್ಲೂ  ದಾಖಲೆಯ 9.5 ಸೆ.ಮೀ. ಮಳೆಯಾಗಿದೆ. ಕೇರಳದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಕಟ್ಟೆಚ್ಚರ: ಅರಬ್ಬಿ ಸಮುದ್ರದ ಆಗ್ನೇಯ ಲಕ್ಷದ್ವೀಪದಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದು, ಪ್ರತಿಕೂಲ ಹವಾಮಾನ ಉಂಟಾಗಲಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ನೌಕಾಪಡೆಯು ಈಗಾಗಲೇ ಮುನ್ನೆಚ್ಚರಿಕೆ ವಹಿಸಿದೆ

ಎಂದು ರಕ್ಷಣಾ ಇಲಾಖೆ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.

ಸ್ಥಳೀಯರು ಮತ್ತು ಮೀನುಗಾರರಿಗೆ ಹಿಂದಿ, ಇಂಗ್ಲಿಷ್‌, ಮಲೆಯಾಳಿ ಮತ್ತು ತಮಿಳು ಭಾಷೆಯಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ತುರ್ತು ಪರಿಹಾರ ಕಾರ್ಯಾಚರಣೆಗೆ ಡಾರ್ನಿಯರ್‌ ವಿಮಾನ ಮತ್ತು ನೌಕಾಪಡೆ ಹಡಗುಗಳನ್ನು ಕೇರಳ ಕರಾವಳಿ ಮತ್ತು ಲಕ್ಷ ದ್ವೀಪಗಳಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !