ಸಿಪಿಎಂ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ

ಗುರುವಾರ , ಜೂಲೈ 18, 2019
22 °C

ಸಿಪಿಎಂ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ

Published:
Updated:

ತಿರುವನಂತಪುರ: ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಹಿರಿಯ ಪುತ್ರನ ವಿರುದ್ಧ ಮುಂಬೈ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ಬೆಳವಣಿಗೆಯು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಬಿನೋಯ್‌ ವಿನೋದಿನಿ ಬಾಲಕೃಷ್ಣನ್‌ ಆರೋಪಿಯಾಗಿದ್ದು, ಹಿಂದೆ ದುಬೈನಲ್ಲಿ ಬಾರ್ ಡಾನ್ಸರ್ ಆಗಿದ್ದ 33 ವರ್ಷ ವಯಸ್ಸಿನ ಮಹಿಳೆಯೊಬ್ಬರು ಇವರ ವಿರುದ್ಧ ದೂರು ನೀಡಿದ್ದಾರೆ. ‘ಬಿನೋಯ್‌ ಜೊತೆಗಿನ ಸಂಬಂಧದಿಂದ ಒಬ್ಬ ಮಗ ಹುಟ್ಟಿದ್ದು ಆತ ಈಗ 8 ವರ್ಷದವನಾಗಿದ್ದಾನೆ’ ಎಂದೂ ಮಹಿಳೆ ಹೇಳಿದ್ದಾರೆ. ಅತ್ಯಾಚಾರ, ವಂಚನೆ ಆರೋಪದಡಿ ಮುಂಬೈನ ಒಶಿವಾರ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. ಬಿನೋಯ್‌ ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ‘ದೂರು ನೀಡಿರುವ ಮಹಿಳೆಯ ಪರಿಚಯವಿದೆ’ ಎಂದು ಒಪ್ಪಿಕೊಂಡಿರುವ ಬಿನೋಯ್‌, ‘ಇದೊಂದು ಬ್ಲ್ಯಾಕ್‌ಮೇಲ್‌ ತಂತ್ರ.  ₹ 5 ಕೋಟಿ ನೀಡುವಂತೆ ಆ ಮಹಿಳೆ ಕಳೆದ ಏಪ್ರಿಲ್‌ನಲ್ಲಿ ನನಗೆ ನೋಟಿಸ್‌ ಕಳುಹಿಸಿದ್ದರು. ಅವರ ವಿರುದ್ಧ ಕೇರಳ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಬಿನೋಯ್‌ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಗೃಹ ಸಚಿವರೂ ಆಗಿರುವ ಬಾಲಕೃಷ್ಣನ್‌ ಅವರ ಪುತ್ರ ಬಿನೋಯ್‌ ವಿರುದ್ಧ ಈ ಹಿಂದೆಯೂ ಅನೇಕ ಆರೋಪಗಳು ಕೇಳಿ ಬಂದಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !