ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯೆ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ: ವ್ಯಾಪಕ ಆಕ್ರೋಶ

Last Updated 29 ನವೆಂಬರ್ 2019, 11:17 IST
ಅಕ್ಷರ ಗಾತ್ರ

ಹೈದರಾಬಾದ್‌: 26 ವರ್ಷದ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ದೇಹವನ್ನು ಸುಟ್ಟುಹಾಕಿ ಕೊಂದಿರುವ ಘಟನೆ ಹೈದರಾಬಾದ್‌ ಹೊರವಲಯದಲ್ಲಿ ನಡೆದಿದೆ. ಬುಧವಾರ ರಾತ್ರಿ ತೆಲಂಗಾಣದ ಶೆಡ್‌ ನಗರದಲ್ಲಿರುವ ಮನೆಯಿಂದ ಅವರು ಕೆಲಸ ಮಾಡುತ್ತಿದ್ದ ಪಶು ಆಸ್ಪತ್ರೆಗೆ ತೆರೆಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಪಶುವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ 26 ವರ್ಷದ ಮಹಿಳೆಬುಧವಾರ ರಾತ್ರಿ ತಮ್ಮ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಅವರ ವಾಹನ ಪಂಕ್ಚರ್ ಆಗಿದೆ. ಆ ವಿಚಾರವಾಗಿ ಬುಧವಾರ ರಾತ್ರಿ 9:15 ಸುಮಾರಿಗೆ ವೈದ್ಯೆ ತಮ್ಮ ಸಹೋದರಿಗೆ ಪೋನ್‌ ಕರೆಮಾಡಿ ಮಾತನಾಡಿದ್ದು, ತಾವು ಟೋಲ್ ಗೇಟ್‌ ಒಂದರ ಬಳಿ ಇರುವುದಾಗಿ ಹೇಳಿದ್ದರು. ‘ಇಲ್ಲಿಅಪರಿಚಿತ ಗಂಡಸರು ಮತ್ತು ಬಹಳಷ್ಟು ಟ್ರಕ್‌ಗಳು ನಿಂತಿವೆ. ನನಗೆ ಭಯವಾಗುತ್ತಿದೆ,’ ಎಂದು ಸಹೋದರಿಗೆ ತಿಳಿಸಿದ್ದಳು. ಅದಕ್ಕೆ ಸಹೋದರಿಯು, ‘ಟೋಲ್‌ ಗೇಟ್‌ ಬಳಿ ವಾಹನ ಬಿಟ್ಟು ಹೋಗು,’ ಎಂದಿದ್ದರು. ಆಗ ವೈದ್ಯೆಯುವಾಹನ ಸರಿಪಡಿಸಲು ಕೆಲ ಅಪರಿಚಿತ ವ್ಯಕ್ತಿಗಳು ಸಹಾಯಕ್ಕೆ ಬಂದಿದ್ದಾರೆ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ಅದಾದ ಕೆಲ ನಿಮಿಷಗಳಲ್ಲಿ ಸಹೋದರಿಯು ವೈದ್ಯೆಗೆ ಮತ್ತೆ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ನಾಪತ್ತೆಯಾದ ವೈದ್ಯೆ ಗುರುವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ದೇಹವನ್ನುಪೆಟ್ರೋಲ್‌ಸುರಿದು ಸುಟ್ಟು ಹಾಕಲಾಗಿದೆ, ದೇಹದ ಮೇಲಿದ್ದಲಾಕೆಟ್‌ ವೈದ್ಯೆಯ ಗುರುತಿಗೆಸಹಾಯ ಮಾಡಿದೆ.

ಈ ಪ್ರಕರಣದಲ್ಲಿ ಕಾಲೇಜ್ ವಿದ್ಯಾರ್ಥಿಯೊಬ್ಬನನ್ನು ಹೈದರಾಬಾದ್‌ ಪೋಲಿಸರು ಗುರುವಾರ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣ ಭೇದಿಸಲು 10 ತಂಡಗಳನ್ನು ರಚಿಸಲಾಗಿದೆ. ವೈದ್ಯೆಯ ದ್ವಿಚಕ್ರ ವಾಹನ ಇನ್ನೂ ಪತ್ತೆಯಾಗಿಲ್ಲ. ಅದು ಪತ್ತೆಯಾದರೆ, ಪ್ರಮುಖ ಸಾಕ್ಷಿಗಳು ದೊರೆಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಪಶುವೈದ್ಯೆ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ವೈದ್ಯೆ ದುರಂತ ಸಾವಿಗೆ ಕಾರಣರಾದವರನ್ನು ಗಲ್ಲಿಗೇರಿಸಬೇಕು ಎಂದು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT