70 ವರ್ಷದ ನಿವೃತ್ತ ಪೊಲೀಸ್‌ನನ್ನು 90 ಸೆಕೆಂಡುಗಳಲ್ಲಿ 48 ಬಾರಿ ಹೊಡೆದು ಕೊಂದರು

7

70 ವರ್ಷದ ನಿವೃತ್ತ ಪೊಲೀಸ್‌ನನ್ನು 90 ಸೆಕೆಂಡುಗಳಲ್ಲಿ 48 ಬಾರಿ ಹೊಡೆದು ಕೊಂದರು

Published:
Updated:

ಅಲಹಾಬಾದ್‌: ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರನ್ನು ಮೂವರು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಕಟ್ಟಿಗೆಗಳಿಂದ ಮಾರಣಾಂತಿಕವಾಗಿ ಹೊಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನೆಯಲ್ಲಿ ಪೊಲೀಸ್‌ ಅಧಿಕಾರಿ ಮೃತಪಟ್ಟಿದ್ದಾರೆ.

ಮೃತ ಪೊಲೀಸ್‌ ಅಧಿಕಾರಿಯನ್ನು ಅಬ್ದುಲ್ ಸಮೂದ್‌ ಖಾನ್‌ (70) ಎಂದು ಗುರುತಿಸಲಾಗಿದೆ.  ತೆಲಿಯಾರ್‌ಗಂಜ್‌ ವೃತ್ತದ ಸಮೀಪದಲ್ಲಿ  ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ದುಷ್ಕರ್ಮಿಗಳು 90 ಸೆಕೆಂಡುಗಳಲ್ಲಿ 48 ಬಾರಿ ಕಟ್ಟಿಗೆಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದಿದ್ದ ಸಮೂದ್‌ ಖಾನ್‌ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.  

ಸೈಕಲ್‌ ಮೇಲೆ ಬರುತ್ತಿದ್ದ ಸಮೂದ್‌ ಖಾನ್‌ ಅವರನ್ನು ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ತಡೆದು ಏಕಾಏಕಿ ಕಟ್ಟಿಗೆಯಿಂದ ಥಳಿಸಿದ್ದಾನೆ. ಸಮೂದ್‌ ಖಾನ್‌ ಕೆಳಗೆ ಬೀಳುತ್ತಿದ್ದಂತೆ ಮತ್ತಿಬ್ಬರು ದುಷ್ಕರ್ಮಿಗಳು ಸೇರಿಕೊಂಡು ಮನಸೋ ಇಚ್ಚೆ ಥಳಿಸಿದ್ದಾರೆ.  ವಾಹನ ಸವಾರರು, ಪಾದಾಚಾರಿಗಳು ಈ ಘಟನೆಯನ್ನು ನೋಡುತ್ತಲೇ ಸಾಗುತ್ತಿದ್ದರೇ ವಿನಾ ರಕ್ಷಣೆಗೆ ಯಾರು ಮುಂದಾಗಲಿಲ್ಲ.

ಸಮೂದ್‌ ಖಾನ್‌ ಅವರನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಪ್ರಕರಣ ಸಂಬಂಧ ಸಮೂದ್‌ ಕಾನ್‌ ಮಗಳು ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಐದು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬ್ರಿಜೇಶ್‌ ಶ್ರೀವಾತ್ಸವ ತಿಳಿಸಿದ್ದಾರೆ. 

ಆಸ್ತಿ ವಿಚಾರವಾಗಿ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜುನೈದ್‌ ಕಮಾಲ್‌ ಎಂಬ ಮುಖ್ಯ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಜುನೈದ್‌ ಕಮಾಲ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.  

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 2

  Frustrated
 • 3

  Angry

Comments:

0 comments

Write the first review for this !