ಪುಸ್ತಕ, ಕಲಾಕೃತಿ, ಬಂದೂಕು, ವಿಂಟೇಜ್ ಕಾರು; ಇವು ರಾಜಸ್ಥಾನದ ಅಭ್ಯರ್ಥಿಗಳ ಆಸ್ತಿ!

ಬುಧವಾರ, ಏಪ್ರಿಲ್ 24, 2019
23 °C
ಲೋಕಸಭೆ ಚುನಾವಣೆ

ಪುಸ್ತಕ, ಕಲಾಕೃತಿ, ಬಂದೂಕು, ವಿಂಟೇಜ್ ಕಾರು; ಇವು ರಾಜಸ್ಥಾನದ ಅಭ್ಯರ್ಥಿಗಳ ಆಸ್ತಿ!

Published:
Updated:

ಜೈಪುರ: ಕಲಾಕೃತಿ, ಪುಸ್ತಕ, ವಿಂಟೇಜ್ ಕಾರು, ಬಂದೂಕು... ಇವು ರಾಜಸ್ಥಾನದ ವಿವಿಧ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಆಸ್ತಿ! ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಟ್‌ನಲ್ಲಿ ಅಭ್ಯರ್ಥಿಗಳು ಈ ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವ, ಜೈಪುರ (ಗ್ರಾಮಾಂತರ) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ₹9 ಲಕ್ಷ ಮೌಲ್ಯದ 15 ಬಂದೂಕುಗಳು ಇರುವುದಾಗಿ ಘೋಷಿಸಿದ್ದಾರೆ. ಈ ಪೈಕಿ 10 ಬಂದೂಕುಗಳು ಉಡುಗೊರೆಯಾಗಿ ದೊರೆತವುಗಳಾಗಿವೆ.

₹64.89 ಲಕ್ಷ ಮೌಲ್ಯದ ಆಭರಣ ಹೊಂದಿರುವುದಾಗಿ ಜೈಪುರದ ರಾಜಕುಮಾರಿ, ರಾಜಸಮಂದ್‌ನ ಬಿಜೆಪಿ ಅಭ್ಯರ್ಥಿ ದಿಯಾ ಕುಮಾರಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಐದು ‘ರೋಲ್ಸ್‌ ರಾಯ್ಸ್’ ವಿಂಟೇಜ್ ಕಾರುಗಳನ್ನು ಹೊಂದಿರುವುದಾಗಿ ಝಾಲವಾಡ್–ಬರಾ ಸಂಸದ ದುಷ್ಯಂತ್ ಸಿಂಗ್ ಉಲ್ಲೇಖಿಸಿದ್ದಾರೆ. ₹16 ಲಕ್ಷ ಮೌಲ್ಯದ ವರ್ಣ ಚಿತ್ರಗಳು ಮತ್ತು ಕಲಾಕೃತಿಗಳು ತಮ್ಮ ಬಳಿ ಇವೆ ಎಂದು ಅಜ್ಮೇರ್‌ನ ಕಾಂಗ್ರೆಸ್ ಅಭ್ಯರ್ಥಿ ರಿಜು ಜುಂಜುನ್‌ವಾಲಾ ಮಾಹಿತಿ ನೀಡಿದ್ದಾರೆ.

₹25,500 ಮೌಲ್ಯದ ಪುಸ್ತಗಳು ಇವೆ ಎಂದು ಕೋಟಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮ್ ನರೈನ್ ಮೀನಾ ಘೋಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !