ಲೋಕಸಭಾ ಚುನಾವಣೆ: ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಸೋಮವಾರ, ಮಾರ್ಚ್ 25, 2019
29 °C

ಲೋಕಸಭಾ ಚುನಾವಣೆ: ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Published:
Updated:

ಲಖನೌ: ಸಮಾಜವಾದಿ ಪಕ್ಷವು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ. 

ಈ ಪಟ್ಟಿಯಲ್ಲಿ ಪಕ್ಷದ ಹಿರಿಯ ಮುಖಂಡ ಮುಲಾಯಮ್ ಸಿಂಗ್ ಯಾದವ್ ಸೇರಿದಂತೆ ಆರು ಅಭ್ಯರ್ಥಿಗಳ ಹೆಸರಿದೆ. ಮುಲಾಯಮ್ ಸಿಂಗ್, ಮೈನ್‌ಪುರಿ ಲೋಕಸಭಾ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಇನ್ನು ಮುಲಾಯಮ್ ಸಿಂಗ್ ಅವರ ಕುಟುಂಬಸ್ಥರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಸೋದರಳಿಯ ಧರ್ಮೇಂದ್ರ ಬದೌನ್‌ನಿಂದ, ಅವರ ಸಹೋದರ ಮತ್ತು ಪಕ್ಷದ ಹಿರಿಯ ಮುಖಂಡ ರಾಮ್‌ ಗೋಪಾಲ್ ಯಾದವ್ ಮಗ ಅಕ್ಷಯ್ ಯಾದವ್ ಫಿರೋಜಾಬಾದ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 

ಕಮಲೇಶ್ ಕಥೇರಿಯಾ – ಇಟಾ, ಶಬೀರ್ ವಾಲ್ಮೀಕಿ – ಬೆಹ್ರಾಚ್, ಭಾಯ್ ಲಾಲ್ – ರಾಬರ್ಟ್‌ಗಂಜ್‌ನಲ್ಲಿ ಚುನಾವಣೆ ಎದುರಿಸಲಿದ್ದಾರೆ. 

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒಳಗೊಂಡಂತೆ ಒಟ್ಟು 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಗುರುವಾರ ಬಿಡುಗಡೆಗೊಳಿಸಿತ್ತು. 

ಇದನ್ನೂ ಓದಿ: ಸೋನಿಯಾ, ರಾಹುಲ್ ಸ್ಪರ್ಧೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !