ಶುಕ್ರವಾರ, ನವೆಂಬರ್ 22, 2019
23 °C

ರಾಜೀವ್‌ ಕುಮಾರ್‌ ಮತ್ತೆ ಗೈರು

Published:
Updated:

ಕೋಲ್ಕತ್ತ: ಬಹುಕೋಟಿ ಶಾರದಾ ಚಿಟ್‌ಫಂಡ್‌ ಹಗರಣದ ಆರೋಪಿ ಕೋಲ್ಕತ್ತದ ಮಾಜಿ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರು ಶುಕ್ರವಾರವೂ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಗುರುವಾರವಷ್ಟೇ ಅವರಿಗೆ ಸಿಬಿಐ ಮತ್ತೊಂದು ನೋಟಿಸ್‌  ಜಾರಿಗೊಳಿಸಿತ್ತು.

ಈ ಪ್ರಕರಣದಲ್ಲಿ ರಾಜೀವ್‌ ಅವರನ್ನು ಬಂಧಿಸಲು ಸಿಬಿಐಗೆ ವಾರಂಟ್‌ ಅಗತ್ಯವಿಲ್ಲ ಎಂದು ನಗರ ನ್ಯಾಯಾಲಯ ಗುರುವಾರ ಹೇಳಿತ್ತು. ಇದರ ಬೆನ್ನಲ್ಲೆ ರಾಜೀವ್‌ ಅವರು ಶುಕ್ರವಾರ ಅಲಿಪೋರ್‌ ಜಿಲ್ಲೆ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಶನಿವಾರ ನಡೆಯಲಿದೆ. 

ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಕಳೆದ ವಾರವೂ ಸಿಬಿಐ ಸಮನ್ಸ್‌ ನೀಡಿತ್ತು. ಆದರೆ ರಾಜೀವ್‌ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಅವರು ಬಾರಾಸಾತ್‌ ವಿಶೇಷ ನ್ಯಾಯಾಲಯದಲ್ಲಿ ಅವರು ಸಲ್ಲಿಸಿದ್ದ ಅರ್ಜಿ ಇತ್ತೀಚೆಗಷ್ಟೆ ತಿರಸ್ಕೃತಗೊಂಡಿತ್ತು.

ಪ್ರತಿಕ್ರಿಯಿಸಿ (+)