ಚುನಾವಣಾ ಬಾಂಡ್‌ ಮಾರಾಟ: ಮಾಹಿತಿ ನೀಡಲು ಎಸ್‌ಬಿಐ ನಿರಾಕರಣೆ

7

ಚುನಾವಣಾ ಬಾಂಡ್‌ ಮಾರಾಟ: ಮಾಹಿತಿ ನೀಡಲು ಎಸ್‌ಬಿಐ ನಿರಾಕರಣೆ

Published:
Updated:

ನವದೆಹಲಿ: ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರು, ಆ ಮೂಲಕ ರಾಜಕೀಯ ಪಕ್ಷಗಳಿಗೆ ಸಂದಾಯವಾದ ಹಣ ಕುರಿತ ವಿವರಗಳನ್ನು  ಆರ್‌ಟಿಐ ಅಡಿ ನೀಡಲು ಎಸ್‌ಬಿಐ ನಿರಾಕರಿಸಿದೆ.

ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿರುವ ಬ್ಯಾಂಕ್‌, ‘ಬಾಂಡ್‌ಗಳ ಮಾರಾಟ, ಸಂಬಂಧಿಸಿದ ಹಣವನ್ನು ರಾಜಕೀಯ ಪಕ್ಷಗಳಿಗೆ ಪಾವತಿಸಿರುವುದು ವೈಯಕ್ತಿಕ ಮಾಹಿತಿ. ಇದು ನಂಬಿಕೆಯ ವಿಷಯವೂ ಆಗಿರುವುದರಿಂದ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ಇದೆ’ ಎಂದು ಉತ್ತರಿಸಿದೆ.

ಕಳೆದ ಮಾರ್ಚ್‌ನಲ್ಲಿ ₹ 222 ಕೋಟಿ ಮೊತ್ತದ ಚುನಾವಣಾ ಬಾಂಡ್‌ ಮಾಡಿದ್ದರೆ, ಏಪ್ರಿಲ್‌ನಲ್ಲಿ ₹ 114.9 ಕೋಟಿಗೆ ಇಳಿದಿದೆ ಎಂದು ಬ್ಯಾಂಕ್‌ ಮಾಹಿತಿ ನೀಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !