ಸೆಕ್ಷನ್‌ 375ರಲ್ಲಿ ಲಿಂಗಭೇದ: ಅರ್ಜಿ ವಿಚಾರಣೆಗೆ ನಕಾರ

7
ಕಾನೂನಿನಲ್ಲಿ ‘ಲಿಂಗ ತಟಸ್ಥ’ ಪರಿಗಣಿಸಿಲ್ಲ

ಸೆಕ್ಷನ್‌ 375ರಲ್ಲಿ ಲಿಂಗಭೇದ: ಅರ್ಜಿ ವಿಚಾರಣೆಗೆ ನಕಾರ

Published:
Updated:
Deccan Herald

ನವದೆಹಲಿ: ಭಾರತೀಯ ಅಪರಾಧ ಸಂಹಿತೆಯ (ಐಪಿಸಿ) ಸೆಕ್ಷನ್‌ 375ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಅತ್ಯಾಚಾರಕ್ಕೆ ಸಂಬಂಧಿಸಿದ ಈ ಕಾಯ್ದೆಯು ‘ಲಿಂಗ ತಟಸ್ಥ’ ಅಲ್ಲ ಎಂದು ಪ್ರತಿಪಾದಿಸಿ ಅರ್ಜಿ ಸಲ್ಲಿಸಲಾಗಿತ್ತು.

‘ಅರ್ಜಿಯಲ್ಲಿನ ವಿಷಯ ಶಾಸನಕ್ಕೆ ಸಂಬಂಧಿಸಿದ್ದು. ಹೀಗಾಗಿ, ಇದು ಸಂಸತ್‌ ವ್ಯಾಪ್ತಿಗೆ ಒಳಪಡುವುದರಿಂದ ನಾವು ಏನನ್ನೂ ಹೇಳುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಮತ್ತು ನ್ಯಾಯಮೂರ್ತಿ ಎಸ್‌.ಕೆ. ಕೌಲ್‌ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸುವುದನ್ನು ಸೆಕ್ಷನ್‌ 376ರಲ್ಲಿ ಪ್ರಸ್ತಾಪಿಸಲಾಗಿದೆ.

 ಪುರುಷರು ಮತ್ತು ತೃತೀಯ ಲಿಂಗಿಗಳ ಮೇಲೆ ನಡೆಯುವ ಅತ್ಯಾಚಾರದ ಬಗ್ಗೆ ಈ ಸೆಕ್ಷನ್‌ ಒಳಗೊಂಡಿಲ್ಲ ಎಂದು  ಸರ್ಕಾರೇತರ ಸಂಸ್ಥೆ ‘ಕ್ರಿಮಿನಲ್‌ ಜಸ್ಟಿಸ್‌ ಸೊಸೈಟಿ ಆಫ್‌ ಇಂಡಿಯಾ’ ಪರ ವಕೀಲ ಆಶೀಮಾ ಮಂಡ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸಂತ್ರಸ್ತೆಯರಿಗೆ ಮಾತ್ರ ಈ ಸೆಕ್ಷನ್‌ ಅನ್ವಯವಾಗುತ್ತಿದ್ದು, ಪುರುಷನನ್ನು ಅಪರಾಧಿಗಳಂತೆ ಪರಿಗಣಿಸಲಾಗಿದೆ. ಆದರೆ, ಮಹಿಳೆಯಿಂದ ಮಹಿಳೆ ಮೇಲೆ, ಪುರುಷನ ಮೇಲೆ ಮತ್ತೊಬ್ಬ ಪುರುಷ ಮತ್ತು ತೃತೀಯ ಲಿಂಗಿ ಮೇಲೆ ತೃತೀಯ ಲಿಂಗಿ ನಡೆಸುವ ಸಮ್ಮತವಲ್ಲದ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !