ಈ ದಿನದಂದು ಬುಡಕಟ್ಟು ಸಮುದಾಯದ ಕಲಾವಿದರು ತಯಾರಿಸಿದ ಕಲಾಚಿತ್ರ, ಕೈಮಗ್ಗ, ಕಲಾಕೃತಿ, ಔಷಧ, ///ಜ್ಯುಯೆಲರಿಯ ಪ್ರದರ್ಶನ ಹಾಗೂ ಬುಡಕಟ್ಟು ಸಮುದಾಯದ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಶಿಫಾರಸುಗಳನ್ನು ಸಮಿತಿ ನೀಡಿದೆ.‘ಎನ್ಸಿಎಸ್ಟಿ ಸಲ್ಲಿಸಿದ ಶಿಫಾರಸುಗಳನ್ನು ಆಧರಿಸಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಗೃಹ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಗೃಹ ಇಲಾಖೆ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದಿಡಲಿದೆ’ ಎಂದು ಎನ್ಸಿಎಸ್ಟಿ ಜಂಟಿ ಕಾರ್ಯದರ್ಶಿ ಎಸ್.ಕೆ.ರಥೋ ತಿಳಿಸಿದರು.