ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಹಲ್ಲೆ ಖಂಡಿಸಿ ಪ್ರಧಾನಿಗೆ ಪತ್ರ ಬರೆದ ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್

Last Updated 4 ಅಕ್ಟೋಬರ್ 2019, 13:19 IST
ಅಕ್ಷರ ಗಾತ್ರ

ಮುಜಾಫರ್‌ಪುರ್: ದೇಶದಲ್ಲಿ ಗುಂಪು ಹಲ್ಲೆ ಕೃತ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಮಾರು 50ರಷ್ಟು ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.

ರಾಮಚಂದ್ರ ಗುಹಾ , ಅಡೂರ್ ಗೋಪಾಲಕೃಷ್ಣನ್,ಮಣಿರತ್ನಂ, ಅಪರ್ಣಾ ಸೇನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸಹಿ ಹಾಕಿರುವ ಪತ್ರ ಇದಾಗಿದ್ದು, ಈ ಪತ್ರ ಬರೆದ ಸೆಲೆಬ್ರಿಟಿಗಳ ವಿರುದ್ದ ಬಿಹಾರದ ಮುಜಾಫರ್‌ಪುರ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು: ರಾಹುಲ್ ಗಾಂಧಿ

ಅಲ್ಲಿನ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಎರಡು ತಿಂಗಳ ಹಿಂದೆ ಸೆಲೆಬ್ರಿಟಿಗಳ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಮುಖ್ಯ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಎಫ್‌ಐಆರ್ ದಾಖಲಿಸಲು ಆದೇಶ ನೀಡಿದ್ದಾರೆ.

ಆಗಸ್ಟ್ 20ರಂದು ಸಿಜೆಎಂ ನನ್ನ ಅರ್ಜಿ ಪರಿಗಣಿಸಿ ಆದೇಶ ನೀಡಿದ್ದು ಗುರುವಾರ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಓಜಾ ಹೇಳಿದ್ದಾರೆ.

ಪತ್ರ ಬರೆದ ಸೆಲೆಬ್ರಿಟಿಗಳ ವಿರುದ್ಧ ದೇಶದ್ರೋಹ, ಸಾಮಾಜಿಕ ಕಿರುಕುಳ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಶಾಂತಿ ಕದಡುವ ಯತ್ನ ಮೊದಲಾದ ಆರೋಪಗಳನ್ನು ಹೊರಿಸಲಾಗಿದೆ.

ದೇಶದ ಘನತೆಯನ್ನು ಹಾಳು ಮಾಡಲು ಮತ್ತು ಪ್ರಧಾನಿಯವರ ಕೆಲಸ ನಿರ್ವಹಣೆಯ ಶಕ್ತಿಗುಂದಿಸುವುದಕ್ಕಾಗಿ ಸೆಲೆಬ್ರಿಟಿಗಳು ಯತ್ನಿಸಿದ್ದಾರೆ ಎಂದು ಓಜಾ ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT