ಶುಕ್ರವಾರ, ಆಗಸ್ಟ್ 23, 2019
26 °C
ಕಾಂಗ್ರೆಸ್‌ ಪಕ್ಷದ ಮಗಳ ಶೀಲಾ

ಶೀಲಾ ದೀಕ್ಷಿತ್‌ ನಿಧನ; ಪ್ರಧಾನಿ ಮೋದಿ, ರಾಹುಲ್‌, ಕೇಜ್ರಿವಾಲ್‌ ಸಂತಾಪ 

Published:
Updated:

ನವದೆಹಲಿ: ಹೃದಯಾಘಾತದಿಂದ ಶನಿವಾರ ನಿಧನರಾದ ಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮೂರು ಅವಧಿಗೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಅವರು ಇತ್ತೀಚೆಗೆ ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷೆಯಾಗಿದ್ದರು. 

‘ದೆಹಲಿ ಅಭಿವೃದ್ಧಿಗಾಗಿ ಅವರ ಕೊಡುಗೆ ಸ್ಮರಣೀಯ‘ ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ. 

ಇದನ್ನೂ ಓದಿ: ಇಂದಿರಾ ಗಾಂಧಿ ಗಮನ ಸೆಳೆದಿದ್ದ ಶೀಲಾ; ರಾಜಕೀಯ ಪ್ರವೇಶ ಆಕಸ್ಮಿಕ

ಇದನ್ನೂ ಓದಿ: ಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್‌ ನಿಧನ

‘ಅವರ ಅಗಲಿಕೆ ದೆಹಲಿಯ ಪಾಲಿಗೆ ಬಹುದೊಡ್ಡ ನಷ್ಟ, ಅವರ ನಡೆಸಿದ ಕಾರ್ಯ ಸದಾ ನೆನಪಿನಲ್ಲಿ ಉಳಿಯುತ್ತದೆ..‘ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಂತಾಪ ಸೂಚಿಸಿದ್ದಾರೆ. 

‘ನಾನು ಅತ್ಯಂತ ಆಪ್ತ ಬಾಂಧವ್ಯ ಹೊಂದಿದ್ದ ಶೀಲಾ ದೀಕ್ಷಿತ್‌ ಅವರು ಇಲ್ಲ ಎಂಬುದನ್ನು ಕೇಳುವುದು ಆಘಾತಕಾರಿಯಾಗಿದೆ. ಅವರು ಕಾಂಗ್ರೆಸ್‌ ಪಕ್ಷದ ಪ್ರೀತಿಯ ಮಗಳು...‘ ಎಂದು ರಾಹುಲ್‌ ಗಾಂಧಿ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ದೆಹಲಿ ಗದ್ದುಗೆ ಏರಿದ ಪಂಜಾಬಿನ ಕಪುರ್ತಲಾದ ಸಜ್ಜನ ರಾಜಕಾರಣಿ... 

Post Comments (+)