ಮಂಗಳವಾರ, ಅಕ್ಟೋಬರ್ 22, 2019
26 °C
₹ 2,397 ಕೋಟಿ ವಂಚನೆ ಆರೋಪ

ರೆಲಿಗೇರ್‌ ಮಾಜಿ ಪ್ರವರ್ತಕ ಶಿವಿಂದರ್‌ ಸಿಂಗ್‌ ಬಂಧನ

Published:
Updated:
prajavani

ನವದೆಹಲಿ: ರೆಲಿಗೇರ್‌ ಫಿನ್‌ವೆಸ್ಟ್‌ ಲಿಮಿಟೆಡ್‌ಗೆ (ಆರ್‌ಎಫ್‌ಎಲ್‌) ಸೇರಿದ ₹ 2,397 ಕೋಟಿ ಕಬಳಿಸಿದ ಆರೋಪ ಎದುರಿಸುತ್ತಿರುವ ರೆಲಿಗೇರ್‌ ಎಂಟರ್‌ಪ್ರೈಸಸ್‌ ಲಿ.ನ (ಆರ್‌ಇಎಲ್‌) ಮಾಜಿ ಪ್ರವರ್ತಕ ಶಿವಿಂದರ್‌ ಸಿಂಗ್‌ ಹಾಗೂ ಇತರ ಮೂವರನ್ನು ಗುರುವಾರ ಬಂಧಿಸಲಾಗಿದೆ.

ಶಿವಿಂದರ್ ಸಿಂಗ್‌, ಮತ್ತೊಬ್ಬ ಪ್ರವರ್ತಕ ಹಾಗೂ ಶಿವಿಂದರ್‌ ಅವರಿಂದ ಬೇರೆಯಾಗಿರುವ ಹಿರಿಯ ಸಹೋದರ ಮಲ್ವಿಂದರ್‌ ಸಿಂಗ್‌ ಹಾಗೂ ಇತರರ ವಿರುದ್ಧ ಆರ್‌ಎಫ್‌ಎಲ್‌ ಮಾರ್ಚ್‌ 27ರಂದು ದೂರು ದಾಖಲಿಸಿತ್ತು. ಈ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿದ್ದಾರೆ.

ಆರ್‌ಇಎಲ್‌ನ ಮಾಜಿ ಚೇರಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುನೀಲ್‌ ಘೋದ್ವಾನಿ, ಉಭಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಕವಿ ಅರೋರಾ ಹಾಗೂ ಅನಿಲ್‌ ಸಕ್ಸೇನಾ ಬಂಧಿತ ಇತರರು. ಎಫ್‌ಐಆರ್‌ನಲ್ಲಿ ಮಲ್ವಿಂದರ್‌ ಸಿಂಗ್‌ ಹೆಸರಿದ್ದರೂ, ಅವರನ್ನು ಬಂಧಿಸಿಲ್ಲ.

ಈ ಇಬ್ಬರು ಸಹೋದರರು ಆರ್‌ಇಎಲ್‌, ರ‍್ಯಾನ್‌ಬಾಕ್ಸಿ ಹಾಗೂ ಫೋರ್ಟಿಸ್‌ ಆಸ್ಪತ್ರೆ ಸಮೂಹ ಸ್ಥಾಪಿಸಿದ್ದರು. ಈ ಪೈಕಿ ಆರ್‌ಎಫ್‌ಎಲ್‌,  ರೆಲಿಗೇರ್‌ ಎಂಟರ್‌ಪ್ರೈಸಸ್‌ ಲಿ.ನ (ಆರ್‌ಇಎಲ್‌) ಅಂಗಸಂಸ್ಥೆಯಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)