ಸಿಧು ವಿರುದ್ಧ ಅಮರಿಂದರ್‌ ಅಸಮಾಧಾನ

7

ಸಿಧು ವಿರುದ್ಧ ಅಮರಿಂದರ್‌ ಅಸಮಾಧಾನ

Published:
Updated:

ಚಂಡೀಗ‌ಡ: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಮುಖಂಡ ನವಜೋತ್‌ಸಿಂಗ್‌ ಸಿಧು ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿಕೊಂಡಿದ್ದಕ್ಕೆ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಪಾಕಿಸ್ತಾನ ಸೇನಾ ಮುಖ್ಯಸ್ಥರೊಂದಿಗೆ ಸಿಧು ಅಷ್ಟೊಂದು ಆತ್ಮೀಯತೆ ಪ್ರದರ್ಶಿಸಿದ್ದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ. 

ಅಮರಿಂದರ್‌ ಸಂಪುಟದಲ್ಲಿ ಸಿಧು ಸಚಿವರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಪಾಕ್‌ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವರನ್ನು ಆಲಂಗಿಸಿದ್ದ ಸಿಧು ಶುಭ ಕೋರಿದ್ದರು. ಅಲ್ಲದೆ, ಪಾಕ್‌ ಆಕ್ರಮಿತ ಕಾಶ್ಮೀರ ಪ್ರಾಂತ್ಯದ ಅಧ್ಯಕ್ಷ ಮಸೂದ್‌ ಖಾನ್‌ ಅವರ ಪಕ್ಕದಲ್ಲೇ ಆಸೀನರಾಗಿದ್ದರು.

ಬಿಜೆಪಿ ಮತ್ತು ಅಕಾಲಿದಳ ಸಿಧು ನಡೆಗೆ ಆಕ್ರೋಶ ವ್ಯಕ್ತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !