ಬುಧವಾರ, ನವೆಂಬರ್ 20, 2019
26 °C

ಎಲ್ಲರನ್ನೂ ವಂಚಿಸಿದ ಬಿಜೆಪಿ: ಸುರ್ಜೇವಾಲಾ ಆರೋಪ

Published:
Updated:

ಕೈತಾಲ್‌ (ಹರಿಯಾಣ): ‘ಬಿಜೆಪಿಯು ಹರಿಯಾಣದಲ್ಲಿ ಐದು ವರ್ಷಗಳ ದುರಾಡಳಿತ ನಡೆಸಿದೆ. ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಜನರನ್ನೂ ಬಿಜೆಪಿ ವಂಚಿಸಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

‘ಬಿಜೆಪಿಯಿಂದ ವಂಚನೆಗೆ ಒಳಗಾಗದ ಸಮುದಾಯವೇ ಇಲ್ಲ. ರೈತರು, ಕಾರ್ಮಿಕರು, ವ್ಯಾಪಾರಿಗಳು, ಮಹಿಳೆಯರು, ಯುವಕರು, ದಲಿತರು ಎಲ್ಲರಿಗೂ ಸುಳ್ಳು ಭರವಸೆ ನೀಡಲಾಗಿದೆ. 5 ವರ್ಷದಲ್ಲಿ ಬಿಜೆಪಿಯು ಕೇವಲ ಲೂಟಿಯನ್ನು ಮಾತ್ರ ಮಾಡಿದೆ’ ಎಂದು ಅವರು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)