ಭಾನುವಾರ, ಸೆಪ್ಟೆಂಬರ್ 15, 2019
30 °C

ಸೆಪ್ಟೆಂಬರ್ 1ರಿಂದ ಸಂಚಾರ ನಿಯಮ ಕಠಿಣ

Published:
Updated:

ನವದೆಹಲಿ: 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ. ಇನ್ನೂ ಕೆಲವು ನಿಯಮಗಳು ಡಿಸೆಂಬರ್ 1ರಿಂದ ಜಾರಿಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದಂಡ, ಪರವಾನಗಿ, ನೋಂದಣಿ ಮತ್ತು ರಾಷ್ಟ್ರೀಯ ಸಾರಿಗೆ ನೀತಿಗೆ ಸಂಬಂಧಿಸಿದ ನಿಯಮಗಳು ಮಾತ್ರ ಇದರಲ್ಲಿ ಇರಲಿವೆ

ಇದನ್ನೂ ಓದಿ: ಅಪಘಾತಕ್ಕೆ ಕಡಿವಾಣ: ದುಬಾರಿ ದಂಡ​

 ಚಾಲನಾ ಪರವಾನಗಿ

* ವಾಹನ ಚಾಲನಾ ಪರವಾನಗಿಯನ್ನು ಪಡೆಯಲು ಇದ್ದ ಕನಿಷ್ಠ ವಿದ್ಯಾರ್ಹತೆಯ ನಿರ್ಬಂಧವನ್ನು ತೆಗೆದುಹಾಕಲಾಗಿದೆ

* ವಾಹನ ಚಾಲನಾ ಪರವಾನಗಿಯ ಅವಧಿ ಮುಗಿದ ನಂತರ ಈಗ ಒಂದು ತಿಂಗಳ ಒಳಗೆ ದಂಡರಹಿತವಾಗಿ ನವೀಕರಣ ಮಾಡಿಕೊಳ್ಳಬಹುದು. ಈಗ ಈ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ

* ಪದೇ–ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಲಾಗುತ್ತದೆ. ಅನರ್ಹತೆಯ ಅವಧಿಯ ನಂತರ ಆ ವ್ಯಕ್ತಿಯು ಮರುತರಬೇತಿ ಪಡೆದರೆ ಮಾತ್ರ ಪರವಾನಗಿಯನ್ನು ನೀಡಲಾಗುತ್ತದೆ

ಇದನ್ನೂ ಓದಿ: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ; ಉಲ್ಲಂಘಿಸಿದರೆ ದ್ವಿಗುಣ ಚಡಿ​

ರಾಷ್ಟ್ರೀಯ ಸಾರಿಗೆ ನೀತಿ

ಸರಕು ಸಾಗಣೆ ಮತ್ತು ಬಸ್‌ಗಳ ಸಂಚಾರಕ್ಕೆ ರಾಷ್ಟ್ರೀಯ ಸಾರಿಗೆ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಲಿದೆ. ಪರ್ಮಿಟ್, ತೆರಿಗೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಸಡಿಲಗೊಳಿಸಲಾಗುತ್ತದೆ. ಇದರಿಂದ ಸಾರಿಗೆ ಉದ್ಯಮದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ

ಇದನ್ನೂ ಓದಿ: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ​

ಉಲ್ಲಂಘನೆಗಳಿಗೆ ಭಾರಿ ದಂಡ

ಉಲ್ಲಂಘನೆ; ಈಗಿನ ದಂಡ; ಪರಿಷ್ಕೃತ ದಂಡ

ಸಂಚಾರಿ ನಿಯಮಗಳ ಉಲ್ಲಂಘನೆ; ₹ 100–200; ₹ 500

ಪರವಾನಗಿ ಇಲ್ಲದೆ ಚಾಲನೆ; ₹ 500; ₹5,000

ಕುಡಿದು ವಾಹನ ಚಾಲನೆ; ₹2,000; ₹ 10,000

ಅತಿವೇಗ; ₹ 400; ₹ 1,000

ರಸ್ತೆಯಲ್ಲಿ ರೇಸಿಂಗ್; ₹ 500; ₹ 5,000

ವಿಮೆ ಇಲ್ಲದೆ ಚಾಲನೆ; ₹ 1,000; ₹ 2,000

ಅಪಾಯಕಾರಿ ಚಾಲನೆ; ₹ 1,000; ₹ 5,000

ದ್ವಿಚಕ್ರವಾಹನದಲ್ಲಿ ಓವರ್‌ಲೋಡಿಂಗ್ (ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ);₹ 100; ₹ 2,000 + ಮೂರು ತಿಂಗಳು ಚಾಲನಾ ಪರವಾನಗಿ ಅಮಾನತು

ಪೋಷಕರು/ಮಾಲೀಕರಿಗೆ ಸಜೆ

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿದರೆ, ವಾಹನ ಚಾಲನೆ ವೇಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮತ್ತು ಅಪಘಾತ ಮಾಡಿದರೆ ಅದಕ್ಕೆ ಆ ಮಕ್ಕಳ ಪೋಷಕರು ಅಥವಾ ಆ ವಾಹನದ ಮಾಲಿಕರೇ ಹೊಣೆಯಾಗುತ್ತಾರೆ

* ಗಂಭೀರ ಸ್ವರೂಪದ ಉಲ್ಲಂಘನೆಯಾಗಿದ್ದರೆ ಆ ಮಕ್ಕಳನ್ನು ಬಾಲಾಪರಾಧಿಗಳ ಕಾನೂನಿನ ಅನ್ವಯ ಕ್ರಮ ಎದುರಿಸಬೇಕಾಗುತ್ತದೆ

* ಆ ವಾಹನದ ನೋಂದಣಿಯನ್ನು 1 ವರ್ಷದವರೆಗೆ ಅಮಾನತಿನಲ್ಲಿ ಇಡಲಾಗುತ್ತದೆ

* ಆ ಮಕ್ಕಳಿಗೆ 25 ವರ್ಷ ತುಂಬುವವರೆಗೆ ವಾಹನ ಚಾಲನಾ ಪರವಾನಿಗೆಯನ್ನು ನೀಡಲಾಗುವುದಿಲ್ಲ

 * ₹ 25,000 ಪೋಷಕರು/ ಮಾಲೀಕರು ಕಟ್ಟಬೇಕಾದ ದಂಡ

* 3 ವರ್ಷ ಪೋಷಕರು/ ಮಾಲೀಕರು ಅನುಭವಿಸಬೇಕಾದ ಜೈಲುವಾಸದ ಅವಧಿ

Post Comments (+)