ಮೋದಿಯ ಭಾರತದಲ್ಲಿ ಮತಯಂತ್ರಗಳಿಗೆ ನಿಗೂಢ ಶಕ್ತಿ ಇದೆ: ರಾಹುಲ್ ಗಾಂಧಿ ಟ್ವೀಟ್‌

7

ಮೋದಿಯ ಭಾರತದಲ್ಲಿ ಮತಯಂತ್ರಗಳಿಗೆ ನಿಗೂಢ ಶಕ್ತಿ ಇದೆ: ರಾಹುಲ್ ಗಾಂಧಿ ಟ್ವೀಟ್‌

Published:
Updated:
Deccan Herald

ನವದೆಹಲಿ: ‘ಚುನಾವಣೆ ಮುಗಿಯಿತು ಎಂದು ಆರಾಮಾಗಿ ಇರಬೇಡಿ. ಮತಯಂತ್ರಗಳ ಬಗ್ಗೆ ಎಚ್ಚರವಿರಲಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ತೆಲಂಗಾಣ ಮತ್ತು ರಾಜಸ್ಥಾನಗಳಲ್ಲಿ ಮತಯಂತ್ರಗಳು ‘ಸ್ಟ್ರಾಂಗ್‌ ರೂಂ’ ಸೇರುವವರೆಗೂ ಅವುಗಳ ಮೇಲೆ ಕಣ್ಣಿಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಮಧ್ಯ ಪ್ರದೇಶದಲ್ಲಿ ಮತದಾನದ ನಂತರ ಮತಯಂತ್ರಗಳು ಬಹಳ ವಿಚಿತ್ರವಾಗಿ ವರ್ತಿಸಿದವು. ಕೆಲವು ಮತಯಂತ್ರಗಳು ಬಸ್‌ ಅನ್ನೇ ಕಳವು ಮಾಡಿದ್ದವು ಮತ್ತು ಎರಡು ದಿನಗಳವರೆಗೆ ಕಾಣೆಯಾಗಿದ್ದವು. ನಂತರ ಹೋಟೆಲ್‌ ಒಂದರಲ್ಲಿ ಕುಡಿಯುತ್ತಿದ್ದಾಗ ಪತ್ತೆಯಾದವು. ಮೋದಿಯ ಭಾರತದಲ್ಲಿ ಮತಯಂತ್ರಗಳಿಗೆ ನಿಗೂಢವಾದ ಶಕ್ತಿಗಳಿವೆ’ ಎಂದು ರಾಹುಲ್ ತಮ್ಮ ಟ್ವೀಟ್‌ನಲ್ಲಿ ಲೇವಡಿ ಮಾಡಿದ್ದಾರೆ.

ಮಧ್ಯಪ್ರದೇಶದ ಕ್ಷೇತ್ರವೊಂದರ ಮತಯಂತ್ರಗಳು ಎರಡು ದಿನ ತಡವಾಗಿ ಸ್ಟ್ರಾಂಗ್‌ ರೂಂಗೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈ ಮಾತು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !