ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಲೇರಿಸುತ್ತದೆ ಕಪ್ಪೆಯ ಬೆವರು!

Last Updated 13 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಶಿಮ್ಲಾ/ಚಂಡಿಗಡ:ಕಪ್ಪೆಗಳ ಬೆವರು ನೆಕ್ಕುವುದರಿಂದ ಅಮೇರುತ್ತದೆಯಂತೆ!

–ಗಾಬರಿಗೊಳಿಸುವ ಇಂತಹ ಪ್ರವೃತ್ತಿಯೊಂದು ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳಲ್ಲಿ ನಿಧಾನವಾಗಿ ಅವರಿಸಿಕೊಳ್ಳುತ್ತಿದೆ.

ನೂರ್ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಇದಕ್ಕೆ ಪುಷ್ಠಿ ನೀಡುವ ಘಟನೆ ನಡೆದಿದೆ. ಮಾದಕದ್ರವ್ಯದ ರೂಪದಲ್ಲಿ ಕಪ್ಪೆಗಳ ಬೆವರು ನೆಕ್ಕುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಕಂಡುಬಂದಿದೆ.

ಮೊದಲಿಗೆ ಕಪ್ಪೆಯೊಂದಿಗೆ ಆಟವಾಡುವ ವಿದ್ಯಾರ್ಥಿಗಳು ಅದನ್ನು ನಿತ್ರಾಣಗೊಳಿಸುತ್ತಾರೆ. ಆಗ ಕಪ್ಪೆಯು ಬೆವರುತ್ತದೆ. ಕಪ್ಪೆಯನ್ನು ಹಿಡಿದು ಬೆವರು ಹೀರಿದಾಗ ಅದು ಅಮಲೇರಿಸುತ್ತದೆ.ಇಂತಹ ವಿಚಿತ್ರ ರೀತಿಯ ಪ್ರವೃತ್ತಿಗಳು ಮಾದಕದ್ರವ್ಯ ವ್ಯಸನದ ಬಗ್ಗೆ ಪರಿಶೀಲನೆ ನಡೆಸುವಂತೆ ಸರ್ಕಾರವನ್ನು ಎಚ್ಚರಿಸಿವೆ.

ಪತ್ತೆಯಾಗಿದ್ದು ಹೇಗೆ?:ನೂರ್ಪುರ ಕ್ಷೇತ್ರದ ಶಾಸಕ ರಾಕೇಶ್ ಪಠಾಣಿಯಾ ಅವರು ಈ ವಿಷಯವನ್ನು ವಿಧಾನಸಭೆ ಕಲಾಪದ ವೇಳೆ ಬಹಿರಂಗಪಡಿಸಿದ್ದಾರೆ. ತಮ್ಮ ಅರಿವಿಗೆ ಬಂದ ಘಟನೆಯೊಂದನ್ನು ಅವರು ವಿವರಿಸಿದ್ದಾರೆ.

ಶಾಲಾ ಅವಧಿಯಲ್ಲಿ ಕಪ್ಪೆಯ ಜೊತೆ ಆಟ ಆಡದಂತೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಸಿಟ್ಟಾದ ವಿದ್ಯಾರ್ಥಿಗಳು ಪ್ರಾಂಶುಪಾಲರನ್ನೇ ಥಳಿಸಿದರು. ಘಟನೆಯ ತನಿಖೆ ನಡೆಸುತ್ತಿದ್ದಾಗ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಕ್ಕೆ ಬಿದ್ದಿರುವುದು ಬಹಿರಂಗವಾಯಿತು.

**

ಮಾದಕ ಶೂ ಪಾಲಿಶ್!

ಮಾದಕದ್ರವ್ಯಕ್ಕೆ ಪರ್ಯಾಯವಾಗಿ ವಿದ್ಯಾರ್ಥಿಗಳು ಶೂ ಪಾಲಿಶ್ ಅನ್ನು ಸೇವಿಸುತ್ತಾರೆ ಎಂಬ ಮಾಹಿತಿಯನ್ನುವಿಧಾನಸಭೆ ಕಲಾಪದಲ್ಲಿ ಮತ್ತೊಬ್ಬ ಶಾಸಕರು ನೀಡಿದರು.

ಮಾದಕ ದ್ರವ್ಯಗಳನ್ನು ಶಾಲಾಮಕ್ಕಳು ಅಡಗಿಸಿಟ್ಟುಕೊಳ್ಳುತ್ತಾರೆ. ರಾಜ್ಯದ ಹಲವು ಕಡೆಗಳಲ್ಲಿ ಇಂತಹ ಗೀಳು ವ್ಯಾಪಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಮಕ್ಕಳಲ್ಲಿ ಡ್ರಗ್ಸ್ ಬಳಕೆಹೆಚ್ಚುತ್ತಿರುವ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಶಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT