ಸೋಮವಾರ, ಜೂನ್ 14, 2021
26 °C

ಹುಲ್ಲಿನ ಬಣವೆ ಬೆಂಕಿ ತಗುಲಿ ಆಟವಾಡುತ್ತಿದ್ದ ಮೂವರು ಹೆಣ್ಣು ಮಕ್ಕಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಹಂಡಿ (ಒಡಿಸ್ಸಾ): ಹುಲ್ಲಿನ ಬಣವೆಯೊಂದರ ಬಳಿ ಆಟವಾಡುತ್ತಿದ್ದ ಮೂವರು ಪುಟ್ಟ ಬಾಲಕಿಯರು ಬೆಂಕಿಗೆ ಅಹುತಿಯಾಗಿರುವ ದುರಂತ ಇಲ್ಲಿನ ಕಳಹಂಡಿ ಜಿಲ್ಲೆಯ ಬಿಜಮಾರ ಗ್ರಾಮದಲ್ಲಿ ಸಂಭವಿಸಿದೆ.

ಮೂವರು ಮಕ್ಕಳಲ್ಲಿ ಇಬ್ಬರು ಅವಳಿ, ಡೈಸಿ ಹಾಗೂ ರೋಸಿ, ಮತ್ತೊಂದು ಮಗು ರಚನಾ ರಾವುತ್ ಎನ್ನಲಾಗಿದ್ದು, ಮೂವರು ನಾಲ್ಕರಿಂದ ಐದು ವರ್ಷದವರು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಸಂಜೆ ಮೂವರು ಬಣವೆ ಸಮೀಪ ಆಟವಾಡುತ್ತಿದ್ದರು, ಇದ್ದಕ್ಕಿದ್ದಂತೆ ಬಣವೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಕ್ಕಳು ಬೆಂಕಿಗೆ ಸಿಲುಕಿ ತೀವ್ರ ಗಾಯಗೊಂಡರು. ಬೆಂಕಿ ಸಮೀಪಕ್ಕೆ ಪೋಷಕರು ಧಾವಿಸಿ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಶೇ. 80 ರಿಂದ 90ರಷ್ಟು ಸುಟ್ಟಗಾಯಗಳಿಂದ ಅಸ್ವಸ್ಥರಾಗಿದ್ದ ಮಕ್ಕಳಲ್ಲಿ ಒಂದು ಮಗು ಮಾರ್ಗ ಮಧ್ಯೆಯೇ ಸಾವನ್ನಪ್ಪಿದೆ.

ಉಳಿದ ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಕೊಕ್ಸಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆನೀಡುತ್ತಿದ್ದ ಸಮಯದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.

'ಶೇ.80 ರಿಂದ 90 ಭಾಗ ಸುಟ್ಟಗಾಯಗಳಾಗಿದ್ದರಿಂದ ಒಂದು ಮಗು ಮಾರ್ಗ ಮಧ್ಯೆ ಮೃತಪಟ್ಟಿದೆ. ಉಳಿದ ಎರಡು ಮಕ್ಕಳು ಆಸ್ಪತ್ರೆಗೆ ದಾಖಲಿಸಿದ 30 ನಿಮಿಷದಲ್ಲಿಯೇ ಮೃತಪಟ್ಟವು' ಎಂದು ಆಸ್ಪತ್ರೆಯ ವೈದ್ಯರಾದ ಡಾ.ನಾರಾಯಣ್ ಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು