21ನೇ ವರ್ಷದ ಸಂಭ್ರಮದಲ್ಲಿ ತೃಣಮೂಲ ಕಾಂಗ್ರೆಸ್

7
ಕಾರ್ಯಕರ್ತರಿಗೆ ಶುಭಾಶಯ ಕೋರಿದ ಮಮತಾ ಬ್ಯಾನರ್ಜಿ

21ನೇ ವರ್ಷದ ಸಂಭ್ರಮದಲ್ಲಿ ತೃಣಮೂಲ ಕಾಂಗ್ರೆಸ್

Published:
Updated:

ಕೊಲ್ಕತ್ತ: ಪಶ್ಚಿಮ ಬಂಗಾಳದ ಪ್ರಬಲ ಪಕ್ಷವಾದ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) 21ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.

ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ ಶ್ರೇಯಸ್ಸಿಗೆ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

ಸಾಕಷ್ಟು ಹೋರಾಟಗಳ ನಡುವೆಯೇ ಜನವರಿ 1, 1988ರಲ್ಲಿ ಟಿಎಂಸಿ ಪಕ್ಷದ ಪಯಣ ಶುರುವಾಯಿತು. ಜನರ ಒಳಿತಿಗಾಗಿ ಎಲ್ಲಾ ಹೋರಾಟಗಳನ್ನು ಎದುರಿಸಿ ದೃಢವಾಗಿ ನಿಂತೆವು. #ತೃಣಮೂಲ21 ಎಂದು ಟ್ವೀಟ್ ಮಾಡಿದ್ದಾರೆ. 

ತೃಣಮೂಲ ಕಾಂಗ್ರೆಸ್‌ನ ಧ್ಯೇಯವಾದ ತಾಯಿ, ಮಣ್ಣು, ಜನ (mother, soil and the people) ಇವುಗಳನ್ನು ಉಲ್ಲೇಖಿಸಿ ಮಾತನಾಡಿದ ಬ್ಯಾನರ್ಜಿ, ಪಕ್ಷದ ಬೆಂಬಲಕ್ಕಾಗಿ ವರ್ಷಪೂರ್ತಿ ಅವಿರತವಾಗಿ ಶ್ರಮಿಸುತ್ತಿರುವ ಪಕ್ಷದ ಕಾರ್ಯಕರ್ತರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ. 

ಈ ಪ್ರಯುಕ್ತ ಮಂಗಳವಾರ ರಾಜ್ಯದಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !