ಲೈಂಗಿಕ ಕಿರುಕುಳ ಆರೋಪ: ರಜೆ ಮೇಲೆ ತೆರಳಲು ಶ್ರೀನಿವಾಸ್‌ಗೆ ‘ಟೈಮ್ಸ್’ ಸೂಚನೆ

7
ಟೈಮ್ಸ್ ಆಫ್‌ ಇಂಡಿಯಾ ಸ್ಥಾನಿಕ ಸಂಪಾದಕರ ವಿರುದ್ಧ ಏಳು ಮಹಿಳೆಯರ ದೂರು

ಲೈಂಗಿಕ ಕಿರುಕುಳ ಆರೋಪ: ರಜೆ ಮೇಲೆ ತೆರಳಲು ಶ್ರೀನಿವಾಸ್‌ಗೆ ‘ಟೈಮ್ಸ್’ ಸೂಚನೆ

Published:
Updated:

ಹೈದರಾಬಾದ್: ಲೈಂಗಿಕ ಕಿರುಕುಳ ಆರೋಪದಲ್ಲಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಬ್ಯೂರೊ ಮುಖ್ಯಸ್ಥ, ರಾಜಕೀಯ ಸಂಪಾದಕ ಪ್ರಶಾಂತ್ ಝಾ ಸ್ಥಾನ ತೊರೆದ ಬೆನ್ನಲ್ಲೇ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯಲ್ಲೂ ಅಂತಹದ್ದೇ ಪ್ರಕರಣ ನಡೆದಿದೆ.

ಟೈಮ್ಸ್‌ ಆಫ್‌ ಇಂಡಿಯಾದ ಹೈದರಾಬಾದ್‌ನ ಸ್ಥಾನಿಕ ಸಂಪಾದಕ ಕೆ.ಆರ್. ಶ್ರೀನಿವಾಸ್ ವಿರುದ್ಧ ಏಳು ಮಹಿಳೆಯರು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ‘ಶ್ರೀನಿವಾಸ್ ವಿರುದ್ಧದ ಆರೋಪಗಳ ಮೇಲಿನ ತನಿಖೆ ಪೂರ್ಣಗೊಳ್ಳುವವರೆಗೂ ಆಡಳಿತಾತ್ಮಕ ರಜೆ ಮೇಲೆ ತೆರಳುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ಟೈಮ್ಸ್‌ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಸ್ಥಾನ ತೊರೆದ ಹಿಂದೂಸ್ತಾನ್ ಟೈಮ್ಸ್ ಬ್ಯೂರೊ ಮುಖ್ಯಸ್ಥ

ಅಶ್ಲೀಲ ಸಂದೇಶಗಳು, ಸಂಜ್ಞೆಗಳನ್ನು ಕಳುಹಿಸುವುದಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಸಂಪಾದಕರ ವಿರುದ್ಧ ನೀಡಿದ ದೂರಿನಲ್ಲಿ ಮಹಿಳೆಯರು ಆರೋಪಿಸಿದ್ದರು.

‘ಎಲ್ಲ ಉದ್ಯೋಗಿಗಳಿಗೂ ಸುರಕ್ಷಿತ, ಕೆಲಸಕ್ಕೆ ಅನುಕೂಲಕರವಾದ ಮತ್ತು ಲೈಂಗಿಕ ಕಿರುಕುಳ ಮುಕ್ತ ವಾತಾವರಣ ನೀಡಲು ಟೈಮ್ಸ್ ಆಫ್‌ ಇಂಡಿಯಾ ಬದ್ಧವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆ.ಆರ್. ಶ್ರೀನಿವಾಸ್ ವಿಚಾರವನ್ನು ಬಿಸಿಸಿಎಲ್‌ನ ಆಂತರಿಕ ದೂರುಗಳ ಸಮಿತಿ ತನಿಖೆ ನಡೆಸಲಿದೆ. ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಶ್ರೀನಿವಾಸ್ ಅವರಿಗೆ ಆಡಳಿತಾತ್ಮಕ ರಜೆ ನೀಡಲಾಗಿದೆ. ಸಮಿತಿಯು ಅದರ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಸ್ವತಂತ್ರವಾಗಿದೆ’ ಎಂದು ಎಲ್ಲ ಉದ್ಯೋಗಿಗಳಿಗೆ ಇ–ಮೇಲ್ ಸಂದೇಶ ಕಳುಹಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಶ್ರೀನಿವಾಸ್ ಅವರನ್ನು ವಜಾಗೊಳಿಸಬೇಕು ಎಂದು ಏಳು ಮಹಿಳೆಯರು ಸೋಮವಾರ ಅರ್ಜಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !