ಗುರುವಾರ , ನವೆಂಬರ್ 14, 2019
27 °C

ದತ್ತಾಂಶದ ಮೇಲೆ ಗ್ರಾಹಕರಿಗೆ ಮಾತ್ರ ಹಕ್ಕು: ಟ್ರಾಯ್‌

Published:
Updated:

ನವದೆಹಲಿ: ದೂರವಾಣಿ ದತ್ತಾಂಶಗಳ ಮೇಲೆ ಬಳಕೆದಾರರಿಗೆ ಮಾತ್ರ ಅಧಿಕಾರ ಇದೆಯೇ ಹೊರತು, ಸೇವಧಾತ ಕಂಪನಿಗಳಿಗೆ ಅಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸೋಮವಾರ ಸ್ಪಷ್ಟಪಡಿಸಿದೆ.

ದೂರವಾಣಿ ಬಳಕೆದಾರರ ದತ್ತಾಂಶ ಸುರಕ್ಷತೆ ಮತ್ತು ಖಾಸಗಿತನ ರಕ್ಷಣೆಗೆ ಸಂಬಂಧಿಸಿದಂತೆ ವ್ಯಕ್ತವಾದ ಆತಂಕದ ಹಿನ್ನೆಲೆಯಲ್ಲಿ ಟ್ರಾಯ್‌ ಈ ಹೇಳಿಕೆ ನೀಡಿದೆ. ಇದರಿಂದ ದೂರವಾಣಿ ಬಳಕೆದಾರರರು ನಿರಾಳಗೊಂಡಿದ್ದಾರೆ.

ದೂರಸಂಪರ್ಕ ವಲಯದಲ್ಲಿ ದತ್ತಾಂಶಗಳ ಮಾಲೀಕತ್ವ, ಖಾಸಗಿತ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಟ್ರಾಯ್‌, ಕೇಂದ್ರ ದೂರಸಂಪರ್ಕ ಇಲಾಖೆಗೆ ಈ ಶಿಫಾರಸು ಮಾಡಿದೆ.

ದತ್ತಾಂಶಗಳ ಮೇಲೆ ಬಳಕೆದಾರರು ಸಂಪೂರ್ಣ ಅಧಿಕಾರ ಹೊಂದಿರುತ್ತಾರೆ. ಸೇವಾಧಾತ ಕಂಪನಿಗಳು, ದತ್ತಾಂಶಗಳ ನಿರ್ವಹಣೆ ಮತ್ತು ಉಸ್ತುವಾರಿಯ ಜವಾಬ್ದಾರಿಯನ್ನು ಮಾತ್ರ ಹೊಂದಿರುತ್ತವೆ. ಗ್ರಾಹಕ ದತ್ತಾಂಶಗಳ ಮೇಲೆ ಕಂಪನಿಗಳು ಯಾವುದೇ ಹಕ್ಕು ಹೊಂದಿರುವುದಿಲ್ಲ ಎಂದು ಹೇಳಿದೆ.

‘ದತ್ತಾಂಶ ಆಯ್ಕೆ ಮಾಡುವ, ಎಚ್ಚರಿಕೆ ನೀಡುವ, ಸಮ್ಮತಿ ನೀಡುವ ಹಾಗೂ ವರ್ಗಾವಣೆ ಮಾಡುವ ಹಕ್ಕುಗಳನ್ನು ಗ್ರಾಹಕರಿಗೆ ನೀಡಬೇಕು’ ಎಂದು ಶಿಫಾರಸು ಮಾಡಿದೆ.

ಪ್ರತಿಕ್ರಿಯಿಸಿ (+)