ರೈಲು ವಿಳಂಬವಾದರೆ ಗರಿಷ್ಠ ವೇಗ

7

ರೈಲು ವಿಳಂಬವಾದರೆ ಗರಿಷ್ಠ ವೇಗ

Published:
Updated:

ನವದೆಹಲಿ: ರೈಲುಗಳು ನಿಗದಿತ ವೇಳೆಗೆ ಗುರಿ ತಲುಪಲು ಸಮಯದ ಅಭಾವ ಎದುರಾದಾಗ ಮಾತ್ರ ಚಾಲಕರು ಗರಿಷ್ಠ ಮಿತಿಗೆ ವೇಗ ಹೆಚ್ಚಿಸಬಹುದು ಎಂದು ರೈಲ್ವೆ ಸಚಿವಾಲಯ ನಿರ್ದೇಶನ ನೀಡಿದೆ.

ನಿಗದಿತ ಸಮಯದಲ್ಲಿ ಗುರಿ ತಲುಪಲು ಸಾಧ್ಯವಿದ್ದರೂ, ಪ್ರಯಾಣದುದ್ದಕ್ಕೂ ರೈಲುಗಳು ‘ಒಪ್ಪಿತ ಗರಿಷ್ಠ ವೇಗ’ದಲ್ಲಿಯೇ ಸಂಚರಿಸಬೇಕು ಎಂದು 2000ದಲ್ಲಿ ನೀಡಿದ್ದ ಆದೇಶವನ್ನು ಈ ನೂತನ ನಿರ್ದೇಶನ ಬದಲಾಯಿಸಿದೆ.

ರೈಲು ಮಿತಿಮೀರಿದ ವೇಗದಲ್ಲಿ ಸಂಚರಿಸಿದರೆ ಚಾಲಕರನ್ನು ಶಿಕ್ಷಿಸಲಾಗುತ್ತದೆ. ಪರಿಣಾಮವಾಗಿ, ಬಹುತೇಕ ರೈಲುಗಳು ನಿಗದಿತ ಸಮಯಕ್ಕೆ ಗುರಿ ತಲುಪುತ್ತಿಲ್ಲ ಎನ್ನುವುದು ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ ನೂತನ ನಿರ್ದೇಶನ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !