ಶನಿವಾರ, ಅಕ್ಟೋಬರ್ 19, 2019
22 °C

ರೈಲ್ವೆ ಬೋನಸ್‌ ಟ್ರೋಲ್‌ನಲ್ಲಿ ಬಯಲಾಯ್ತು ನೌಕರರಿಗೆ ಸಿಗುವ ಹಣವೆಷ್ಟೆಂದು

Published:
Updated:

ಬೆಂಗಳೂರು: ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಸಿಬ್ಬಂದಿಗೆ ಬೋನಸ್‌ ಘೋಷಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.

ಇದೇನಪ್ಪ ಬೋನಸ್‌ ವಿಚಾರವೂ ಟ್ರೋಲ್‌ ಆಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದೀರಾ? ಇಲ್ಲಿ ಕೇಂದ್ರ ಸರ್ಕಾರ ಬೋನಸ್‌ ಘೋಷಿಸಿದ ರೀತಿ ಟ್ರೋಲ್‌ಗೆ ಗುರಿಯಾಗಿದೆ. 

ಇದನ್ನೂ ಓದಿ: 2017–2018 ರೈಲ್ವೆ ಸಿಬ್ಬಂದಿಗೆ ಬೋನಸ್

11.52 ಲಕ್ಷ ರೈಲ್ವೆ ನೌಕರರಿಗೆ  78 ದಿನಗಳ ವೇತನವನ್ನು ಬೋನಸ್‌ ಆಗಿ ಪಡೆಯಲಿದ್ದಾರೆ ಎನ್ನುವ ಘೋಷಣೆಯನ್ನು ರೈಲ್ವೆ ಸಚಿವ ಪ್ರಕಾಶ್‌ ಜಾವಡೇಕರ್ ಮಾಡಿದರು. ಇದೇನು ಹೊಸದಲ್ಲ, ಅನೇಕ ವರ್ಷಗಳಿಂದ ರೈಲ್ವೆ ಇಲಾಖೆ ತನ್ನ ಸಿಬ್ಬಂದಿ ಬೋಸನ್‌ ನೀಡುತ್ತಿದೆ ಎನ್ನುವುದು ಟ್ರೋಲಿಗರ ವಾದ.

ಟ್ರೋಲ್‌ ಆದ ಬೋನಸ್‌ ವಿಚಾರ ಏನೆಂದರೆ, 78 ದಿನಗಳ ಬೋನಸ್‌ ಎಂದ ಕೂಡಲೇ ಜನ ಲಕ್ಷದ ರೂಪದಲ್ಲಿ ಹಣ ಬರುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ, ಅವರಿಗೆ ಬೋನಸ್‌ ಆಗಿ ಸಿಗುತ್ತಿರುವುದು ₹17,951.

ಇದನ್ನೂ ಓದಿ: ಇಲಾಖೆ ನಷ್ಟದಲ್ಲಿ­ದ್ದರೂ ರೈಲ್ವೆ ನೌಕರರಿಗೆ ಸಿಗಲಿದೆ 78 ದಿನಗಳ ಬೋನಸ್‌

ಕಳೆದ ನಾಲ್ಕು ವರ್ಷಗಳಿಂದ ದೀಪಾವಳಿಗೆ ನೀಡಲಾಗುತ್ತಿರುವ ಬೋನಸ್‌ ಅನ್ನೇ ಈ ವರ್ಷವೂ ಸರ್ಕಾರ ನೀಡುತ್ತದೆ ಇದರಲ್ಲಿ ಹೊಸದೇನಿಲ್ಲ ಎನ್ನುತ್ತದೆ ಟ್ರೋಲ್‌ ಪೋಸ್ಟ್‌.

ಮೂಲ ವೇತನದ ಆಧಾರ ಮೇಲೆಯೇ ಬೋನಸ್‌ ನೀಡಲಾಗುತ್ತದೆ. 7ನೇ ವೇತನ ಆಯೋಗದ ಪ್ರಕಾರ ರೇಲ್ವೆಯಲ್ಲಿ ಕಾರ್ಮಿಕರಿಗೆ ₹18 ಸಾವಿರ ವೇತನವಿದ್ದು, ₹7 ಸಾವಿರ ಮೂಲ ವೇತನ ನಿಗದಿಪಡಿಸಲಾಗಿದೆ. ₹7000 x 12 /365 * 78 = 17,951 ಎಂದೂ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

Post Comments (+)