ಗೃಹ ಇಲಾಖೆಗೆ ₹1.03 ಲಕ್ಷ ಕೋಟಿ

7
ಪೊಲೀಸ್‌ ವ್ಯವಸ್ಥೆ ಆಧುನೀಕರಣ

ಗೃಹ ಇಲಾಖೆಗೆ ₹1.03 ಲಕ್ಷ ಕೋಟಿ

Published:
Updated:

ನವದೆಹಲಿ : ಗೃಹ ಇಲಾಖೆಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಇದೇ ಮೊದಲ ಬಾರಿಗೆ ₹1 ಲಕ್ಷ ಕೋಟಿ ದಾಟಿದೆ.

ಪೊಲೀಸ್‌ ಪಡೆಗಳು ಮತ್ತು ಗಡಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹1,03,927 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.  ಕಳೆದ ಬಾರಿಗೆ ಹೋಲಿಸಿದರೆ ಶೇ 4.9ರಷ್ಟು ಹೆಚ್ಚು ಅನುದಾನ ಗೃಹ ಇಲಾಖೆಗೆ ಸಿಕ್ಕಿದೆ.  

ದೆಹಲಿ ಪೊಲೀಸ್‌ ಇಲಾಖೆಗೆ ₹7,496.91 ಕೋಟಿ ಅನುದಾನ ನೀಡಲಾಗಿದೆ. ಪಾಕಿಸ್ಥಾನ, ಚೀನಾ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹2,000 ಕೋಟಿ ಅನುದಾನ ಮೀಸಲಿಡಲಾಗಿದೆ. ಇದಲ್ಲದೇ , ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಆಂತರಿಕ ಭದ್ರತೆ ಕಾಪಾಡಲು ನಿಯೋಜಿತಗೊಂಡಿರುವ ಕೇಂದ್ರೀಯ ಪೊಲೀಸ್‌ ಪಡೆಗೆ ₹23,742.04 ಕೋಟಿ ಮೀಸಲಿಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !