ಅರ್ಹ ಭಾರತೀಯರಿಗೆ ಸ್ವಾಗತ: ಅಮೆರಿಕದ ಕಾನ್ಸುಲ್‌ ಜನರಲ್‌

7

ಅರ್ಹ ಭಾರತೀಯರಿಗೆ ಸ್ವಾಗತ: ಅಮೆರಿಕದ ಕಾನ್ಸುಲ್‌ ಜನರಲ್‌

Published:
Updated:
Deccan Herald

ಮುಂಬೈ (ಪಿಟಿಐ): ‘ಅಮೆರಿಕ ಅರ್ಹ ಭಾರತೀಯರನ್ನು ಸದಾ ಸ್ವಾಗತಿಸುತ್ತದೆ. ಅಂಥವರಿಗೆ ಪ್ರೋತ್ಸಾಹ ಸಹ ನೀಡುತ್ತದೆ’ ಎಂದು ಭಾರತದಲ್ಲಿನ ಅಮೆರಿಕದ ಕಾನ್ಸುಲ್‌ ಜನರಲ್‌ ಎಡ್ಗರ್ಡ್‌ ಕಗನ್‌ ಹೇಳಿದ್ದಾರೆ.

ಎಚ್‌–1ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಮತ್ತಷ್ಟೂ ಕಠಿಣಗೊಳಿಸುತ್ತಿರುವ ಸಂದರ್ಭದಲ್ಲಿ, ಎಡ್ಗರ್ಡ್‌ ಕಗನ್‌ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

‘ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಭಾರತೀಯರು ಅಮೆರಿಕಕ್ಕೆ ಹೋಗಿದ್ದಾರೆ. ಇದು ಅಮೆರಿಕವು ತಮಗೆ ಸ್ವಾಗತ, ಪ್ರೋತ್ಸಾಹ ನೀಡುತ್ತಿದೆ ಎಂಬ ಅರಿವು ಈ ದೇಶವಾಸಿಗಳಲ್ಲಿದೆ ಎಂಬುದನ್ನು ತೋರುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಅಮೆರಿಕದಲ್ಲಿ ಅಧ್ಯಯನ ಕೈಗೊಳ್ಳಲು ಭಾರತೀಯ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿಯೂ ಸಾಕಷ್ಟು ಸಂಖ್ಯೆಯ ಅಮೆರಿಕದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಮಾನ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟೂ ಗಟ್ಟಿಗೊಳಿಸುತ್ತದೆ’ ಎಂದು ಹೇಳಿದರು.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದೊಂದಿಗೆ ಸದೃಢ ಸಂಬಂಧ ಹೊಂದಲು ಬದ್ಧರಾಗಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !