ಶುಕ್ರವಾರ, ಡಿಸೆಂಬರ್ 13, 2019
24 °C

ಉತ್ತರ ಪ್ರದೇಶ: ಪತ್ನಿ ಗರ್ಭದಲ್ಲಿ ಹೆಣ್ಣುಮಗು ಇದೆ ಎಂದು ತಲಾಖ್ ನೀಡಿದ ಪತಿ!

ಪಿಟಿಐ Updated:

ಅಕ್ಷರ ಗಾತ್ರ : | |

ಮುಜಫ್ಫರ್‌ನಗರ: ಪತ್ನಿಯ ಹೊಟ್ಟೆಯಲ್ಲಿ ಹೆಣ್ಣು ಮಗು ಬೆಳೆಯುತ್ತಿದೆ ಎಂಬುದನ್ನು ತಿಳಿದ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ ಪ್ರಕರಣ ಉತ್ತರ ಪ್ರದೇಶದ ಛಾಪ್ರಾ ಎಂಬಲ್ಲಿ ನಡೆದಿದೆ.

ಈ ವಿಚಾರವಾಗಿ ಗಾಲಿಬ್ ಎಂಬ ವ್ಯಕ್ತಿ ಮತ್ತು ಇತರ 9 ಮಂದಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸರು ಗುರುವಾರ ತಿಳಿಸಿದ್ದಾರೆ.

ಗರ್ಭಿಣಿಯಾಗಿದ್ದ ಫರ್ಜಾನಾಗೆ ಆಕೆಯ ಪತಿ ಗಾಲಿಬ್, ಬಲವಂತವಾಗಿ ಪ್ರಸವಪೂರ್ವ ಭ್ರೂಣಲಿಂಗ ‍‍ಪತ್ತೆ ಪರೀಕ್ಷೆ ಮಾಡಿಸಿದ್ದ.  ಪತ್ನಿಯ ಹೊಟ್ಟೆಯಲ್ಲಿ ಹೆಣ್ಣು ಮಗು ಬೆಳೆಯುತ್ತಿದೆ ಎಂಬ ವಿಷಯ ಅರಿತ ಕೂಡಲೇ ಭ್ರೂಣಹತ್ಯೆ ಮಾಡಲು ಪತ್ನಿಯನ್ನು ಒತ್ತಾಯಿಸಿದ್ದ. ಆದರೆ, ಫರ್ಜಾನಾ ಇದಕ್ಕೆ ಒಪ್ಪಿರಲಿಲ್ಲ. ಕೆಲ ದಿನಗಳ ನಂತರ ಫರ್ಜಾನಾಗೆ ಗಾಲಿಬ್ ಮೌಖಿಕವಾಗಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫರ್ಜಾನಾ–ಗಾಲಿಬ್ ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ತ್ರಿವಳಿ ತಲಾಖ್‌ ಅನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ‘ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ಸಂರಕ್ಷಣೆ) ಮಸೂದೆ’ಗೆ ಆಗಸ್ಟ್ 1ರಂದು ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ದೊರೆತಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು