ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯೂಶನ್ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆದ ಶಿಕ್ಷಕ; ವಿಡಿಯೊ ವೈರಲ್

Last Updated 19 ನವೆಂಬರ್ 2018, 10:39 IST
ಅಕ್ಷರ ಗಾತ್ರ

ಅಲಿಘರ್: ಟ್ಯೂಶನ್‌ಗೆ ಬಂದಿದ್ದ ಬಾಲಕನೊಬ್ಬನಿಗೆ ಶಿಕ್ಷಕ ಮನಬಂದಂತೆ ಅಮಾನುಷವಾಗಿ ಚಪ್ಪಲಿಯಿಂದ ಹೊಡೆದ ಘಟನೆ ಉತ್ತರಪ್ರದೇಶದ ಅಲಿಘರ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ.

ಘಟನೆಯ ವಿವರ:
ವಿದ್ಯಾರ್ಥಿಯು ಎಂದಿನಂತೆ ಓದಲು ಕುಳಿತಿದ್ದನು. ಆಗ ಪಕ್ಕದಲ್ಲೇ ಕುಳಿತ ಶಿಕ್ಷಕ ಇದ್ದಕ್ಕಿದ್ದಂತೆ ಮನಬಂದಂತೆ ಹೊಡೆಯಲು ಶುರುಮಾಡುತ್ತಾನೆ. ಬಳಿಕ ಚಪ್ಪಲಿಯಿಂದಲೂ ಹೊಡೆದು, ಕೆನ್ನೆಗೆ ತಲೆಕೂದಲನ್ನು ಹಿಡಿದು ಎಳೆದಾಡಿ ಹಿಂಸಿಸುತ್ತಾನೆ.

ಬಾಲಕನದೇಹ ಮತ್ತು ಮುಖದ ಮೇಲೆ ಹೊಡೆತದ ಗುರುತುಗಳನ್ನುಕಂಡ ಪೋಷಕರುವಿಚಾರಿಸಿದಾಗ ಶಿಕ್ಷಕರ ವರ್ತನೆ ಬಗ್ಗೆ ವಿವರಿಸಿದ್ದಾನೆ. ಶಿಕ್ಷಕನ ಕೋಣೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಶಿಕ್ಷಕನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಈ ಘಟನೆ ಕುರಿತಾದ ವಿಡಿಯೊ ದೊರೆತಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಕರ ಬಂಧನಕ್ಕೆ ತಂಡವನ್ನು ರಚಿಸಲಾಗಿದೆ ಎಂದು ಎಸ್‌ಪಿ ಅಶುತೋಶ್ ದ್ವಿವೇದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT