ನವದೆಹಲಿ: ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾ 17 ದೇಶಗಳಿಗೆ ಜುಲೈ 3ರಿಂದ 15ರ ಅವಧಿಯಲ್ಲಿ 170 ವಿಮಾನಗಳ ಸಂಚಾರ ಸೇವೆ ಒದಗಿಸಲಿದೆ.
ವಂದೇ ಭಾರತ್ ಮಿಷನ್‌ನ ನಾಲ್ಕನೇ ಹಂತದಲ್ಲಿ ಕೆನಡಾ, ಅಮೆರಿಕ, ಇಂಗ್ಲೆಂಡ್, ಕೀನ್ಯಾ, ಶ್ರೀಲಂಕಾ, ಫಿಲಿಪ್ಪೀನ್ಸ್, ಕಿರ್ಗಿಸ್ತಾನ, ಸೌದಿ ಅರೇಬಿಯಾ, ಬಾಂಗ್ಲಾದೇಶ, ಥಾಯ್ಲೆಂಡ್, ದಕ್ಷಿಣ ಆಫ್ರಿಕಾ, ರಷ್ಯಾ, ಆಸ್ಟ್ರೇಲಿಯ, ಮ್ಯಾನ್ಮಾರ್, ಜಪಾನ್, ಉಕ್ರೇನ್, ವಿಯೆಟ್ನಾಂಗಳಿಗೆ ಸಂಪರ್ಕ ಒದಗಿಸಲಾಗುತ್ತದೆ.
ಕೋವಿಡ್‌ನಿಂದಾಗಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಭಾರತ ನಿರ್ಬಂಧ ಹೇರಿತ್ತು. ಇದರಿಂದ ವಿದೇಶಗಳಲ್ಲಿ ಅತಂತ್ರರಾಗಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಮೇ 6ರಂದು ಆರಂಭಿಸಿತ್ತು.
ಅಧಿಕೃತ ಹೇಳಿಕೆಯ ಪ್ರಕಾರ, ನಾಲ್ಕನೇ ಹಂತದಲ್ಲಿ 32 ವಿಮಾನಗಳು ಭಾರತ–ಬ್ರಿಟನ್, ಭಾರತ–ಅಮೆರಿಕ ನಡುವೆ ಸಂಚರಿಸಲಿವೆ. ಅಂತೆಯೇ, ಭಾರತ–ಸೌದಿ ಅರೇಬಿಯಾ ನಡುವೆ 26 ವಿಮಾನಗಳು ಸಂಚರಿಸಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.