ಗುರುವಾರ , ಜೂನ್ 24, 2021
22 °C

ಜಗನ್‌ಗೆ ರಕ್ಷಣೆ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ‘ಪ್ರಜಾ ಸಂಕಲ್ಪ ಯಾತ್ರೆ’ಯನ್ನು ಪುನರಾರಂಭಿಸಿರುವ ಜಗನ್ ಮೋಹನ್ ರೆಡ್ಡಿ ಅವರಿಗೆ ಕೇಂದ್ರ ಭದ್ರತಾ ಪಡೆಗಳಿಂದ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಗೌರವ ಅಧ್ಯಕ್ಷರಾಗಿರುವ ಅವರ ತಾಯಿ ವೈ.ಎಸ್‌. ವಿಜಯಮ್ಮ  ಭಾನುವಾರ ಒತ್ತಾಯಿಸಿದ್ದಾರೆ.

ಅಕ್ಟೋಬರ್‌ 25ರಂದು ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಲು ಹೈದರಾಬಾದ್‌ಗೆ ತೆರಳುತ್ತಿದ್ದ ಜಗನ್‌ ಮೋಹನ್‌ ರೆಡ್ಡಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ನೆಪದಲ್ಲಿ ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ. ಅವರ ಎಡಭುಜಕ್ಕೆ ಗಾಯವಾಗಿದ್ದ ಕಾರಣ ಪಾದಯಾತ್ರೆಯನ್ನು ನಿಲ್ಲಿಸಿ, ಮೂರು ವಾರಗಳ ಕಾಲ ವಿಶ್ರಾಂತಿ ಪಡೆದಿದ್ದರು.

‘ನನ್ನ ಮಗನಿಗೆ ಇದು ಪುನರ್ ಜನ್ಮವಿದ್ದಂತೆ, ಕಳೆದ 30 ವರ್ಷಗಳಿಂದ ಅವರ ತಂದೆ ವೈ.ಎಸ್‌ ರಾಜಶೇಖರ ರೆಡ್ಡಿ ಮೇಲೆ ಜನರು ಇಟ್ಟಿರುವ ಪ್ರೀತಿ ಹಾಗೂ ಅವರ ಆಶೀರ್ವಾದದಿಂದ ಜಗನ್‌ ಮೋಹನ್‌ ರೆಡ್ಡಿ ಚೇತರಿಸಿಕೊಂಡು ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ’ ಎಂದು ವಿಜಯಮ್ಮ ತಿಳಿಸಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು