ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಚರ್ಚೆಯೊಂದಕ್ಕೆ ₹35 ಸಾವಿರದ ಪುಸ್ತಕ ಖರೀದಿಸಿದ್ದ ಅರುಣ್‌ ಜೇಟ್ಲಿ

Last Updated 24 ಆಗಸ್ಟ್ 2019, 12:06 IST
ಅಕ್ಷರ ಗಾತ್ರ

ನವದೆಹಲಿ: ಉತ್ತಮ ಸಂಸದೀಯಪಟುವಾಗಿದ್ದಅರುಣ್‌ಜೇಟ್ಲಿರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆಚರ್ಚೆಯೊಂದರಸಿದ್ಧತೆಗಾಗಿ ಕಾನೂನಿಗೆ ಸಂಬಂಧಿಸಿದಂತೆ ₹ 35 ಸಾವಿರ ಮೊತ್ತದ ಹೊಸ ಪುಸ್ತಕಗಳನ್ನು ಖರೀದಿಸಿದ್ದರು.

2011ರಲ್ಲಿ ಅರುಣ್ಜೇಟ್ಲಿರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಈ ವೇಳೆ ಕಲ್ಕತ್ತ ಹೈಕೋರ್ಟ್‌ನ ನ್ಯಾಯಾಧೀಶರಾದಸೌಮಿತ್ರಸೇನ್ವಿರುದ್ಧದುರ್ವತನೆಮತ್ತು ಅವ್ಯವಹಾರ ಆರೋಪದ ಮೇಲೆ ರಾಜ್ಯಸಭೆಯಲ್ಲಿವಾಗ್ದಂಡನೆಗೆಗುರಿಯಾಗಿದ್ದರು.

ವಾಗ್ದಂಡನೆಯವಿಸ್ತೃತ ಚರ್ಚೆಗಾಗಿ ಅರುಣ್‌ಜೇಟ್ಲಿಅವರು ಕಾನೂನಿಗೆ ಸಂಬಂಧಿಸಿದ ಹಲವು ಹೊಸ ಪುಸ್ತಕಗಳನ್ನು ಖರೀದಿಸಿ ಸದನಕ್ಕೆ ತಂದಿದ್ದರು. ತಮ್ಮ ಚರ್ಚೆಗೆ ಪೂರಕವಾಗಿ ಸೂಕ್ತಸಾಕ್ಷ್ಯಧಾರಗಳನ್ನುನೀಡಲು ಸದನಕ್ಕೆ ಪುಸ್ತಕಗಳನ್ನು ತಂದಿರುವುದಾಗಿ ಅವರು ಹೇಳಿದ್ದರು.

ಸೌಮಿತ್ತಸೇನ್ವಾಗ್ದಂಡನೆಯಚರ್ಚೆಯನ್ನು ಅರುಣ್‌ಜೇಟ್ಲಿಸುದೀರ್ಘವಾಗಿ ಮಂಡಿಸಿದ್ದರು. ಆದರೆ ಸದನದಲ್ಲಿಸೌಮಿತ್ತಸೇನ್ವಿರುದ್ಧವಾಗ್ದಂಡನೆಮಂಡಿಸಲಾಯಿತು. ಬಳಿಕಸೌಮಿತ್ತಸೇನ್ರಾಜೀನಾಮೆ ನೀಡಿದ್ದರು.

ಕಲಾಪ ಮುಗಿದ ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು₹35 ಸಾವಿರ ನೀಡಿ ಕಾನೂನಿಗೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿ ಮಾಡಿರುವುದಾಗಿ ಹೇಳಿದ್ದರು.

ಅಟಲ್‌ಬಿಹಾರಿವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅರುಣ್‌ಜೇಟ್ಲಿಕಾನೂನು ಸಚಿವರಾಗಿ ಕೆಲಸ ಮಾಡಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯ ತಿದ್ದುಪಡಿಗೆ ರಚನಾತ್ಮಕ ಸಲಹೆಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು. 2009ರಿಂದ 2014ರವರೆಗೂರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಅರುಣ್‌ಜೇಟ್ಲಿಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT