ಭಾನುವಾರ, ನವೆಂಬರ್ 17, 2019
24 °C

ನಕ್ಸಲ್‌ ದಾಳಿ: ಯೋಧ ಸಾವು

Published:
Updated:

ಬಿಜಾಪುರ (ಛತ್ತೀಸಗಡ): ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್‌ನ ಯೋಧರೊಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. ಈ ಚಕಮಕಿಯಲ್ಲಿ ಕೆಲವು ನಕ್ಸಲರೂ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

‘ಪಾಮೆದ್‌ ಪ್ರದೇಶದಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದ್ದು, ಸಿಆರ್‌ಪಿಎಫ್‌, ಕೊಬ್ರಾ ಹಾಗೂ ರಾಜ್ಯ ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ’ ಎಂದು ಉಪ ಪೊಲೀಸ್ ಮಹಾನಿರ್ದೇಶಕ (ನಕ್ಸ್‌ಲ್ ವಿರೋಧಿ ಕಾರ್ಯಪಡೆ) ಸುಂದರ್‌ರಾಜ್‌ ಪಿ ಹೇಳಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್‌ನ 151ನೇ ಬೆಟಾಲಿಯನ್‌ನ ಯೋಧ ಕಾಮತ್ ಪ್ರಸಾದ್‌ ಅವರನ್ನು ತೆಲಂಗಾಣದ ಚೇರ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಬುಧವಾರ ದಾಂತೇವಾಡದಲ್ಲಿ ಇಬ್ಬರು ನಕ್ಸಲರನ್ನು ಭದ್ರತಾಪಡೆಗಳು ಹತ್ಯೆ ಮಾಡಿದ್ದವು.

ಪ್ರತಿಕ್ರಿಯಿಸಿ (+)