ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಜಿಲ್ಲೆಯಲ್ಲೇ 10 ಸಾವಿರ ಮಾಸ್ಕ್‌ ತಯಾರಿ

ಸ್ವಸಹಾಯ ಸಂಘ, ಸ್ವಯಂ ಸೇವಕರಿಂದ ಹೊಲಿಗೆ ಕಾರ್ಯ ಆರಂಭ, ಜಿಲ್ಲಾಡಳಿತದಿಂದ ಅನುದಾನ
Last Updated 18 ಏಪ್ರಿಲ್ 2020, 2:27 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ವೈರಸ್‌ ಕ್ಷಿಪ್ರವಾಗಿ ಹರಡುತ್ತಿದ್ದು ಆತಂಕ ಮೂಡಿಸಿದೆ. ಕೊಡಗು ಜಿಲ್ಲೆಯಲ್ಲೂ ಜಿಲ್ಲಾಡಳಿತವು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಮೆಡಿಕಲ್‌ ಶಾಪ್‌ಗಳಲ್ಲಿ ಮಾಸ್ಕ್‌ಗಳ ಕೊರತೆಯಾಗಿದೆ. ಇನ್ನು ಎನ್‌ 95 ಮಾಸ್ಕ್‌ ಖರೀದಿಯು ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಜಿಲ್ಲಾಡಳಿತವೇ ಉಪಾಯ ಕಂಡುಕೊಂಡಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ 10 ಸಾವಿರ ಬಟ್ಟೆಯ ಮಾಸ್ಕ್‌ಗಳನ್ನು ತಯಾರಿಸಲು ಮುಂದಾಗಿದೆ.

ಜಿಲ್ಲೆಯ ನಾಲ್ಕು ಸ್ಥಳದಲ್ಲಿ ಹೊಲಿಗೆ ಕಾರ್ಯವೂ ಆರಂಭವಾಗಿದ್ದು ನಾಲ್ಕೈದು ದಿನಗಳಲ್ಲಿ 10 ಸಾವಿರ ಮಾಸ್ಕ್‌ಗಳು ಸಿದ್ಧಗೊಳ್ಳಲಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಸ್ವಸಹಾಯ ಸಂಘ ಹಾಗೂ ಸ್ವಯಂ ಸೇವಕರು ಮಾಸ್ಕ್‌ ತಯಾರಿಯಲ್ಲಿ ತೊಡಗಿದ್ದಾರೆ. ಮಡಿಕೇರಿಯ ಮಹಾದೇವಪೇಟೆ, ಇಂದಿರಾ ನಗರ, ಸುಂಟಿಕೊಪ್ಪ ಸ್ವಸ್ಥ ಮಹಿಳಾ ಸಂಘ ಹಾಗೂ ಕಡಗದಾಳು ಗ್ರಾಮದ ಮಹಿಳಾ ಸದಸ್ಯರು, ಮಾಸ್ಕ್‌ ತಯಾರಿ ಮಾಡುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಕೆಲಸವಿಲ್ಲದೆ ಬರಿಗೈಯಲ್ಲಿದ್ದ ಮಹಿಳಾ ಸಂಘಟನೆಯ ಸದಸ್ಯರಿಗೆ ಮನೆಯಲ್ಲೇ ಕುಳಿತು ಮಾಡುವ ಕೆಲಸ ಸಿಕ್ಕಿದೆ.

ಅಗತ್ಯವುಳ್ಳವರಿಗೆ ಉಚಿತ:ಮೊದಲ ಹಂತದ ತಯಾರಿ ಆರಂಭವಾಗಿದೆ. ಬಡವರಿಗೆ ಹಾಗೂ ಕಾರ್ಮಿಕರಿಗೆ ಉಚಿತವಾಗಿ ಮಾಸ್ಕ್‌ ನೀಡುವ ಆಲೋಚನೆಯಿದೆ. ಇನ್ನು ಸ್ಥಿತಿವಂತರು ಮಾಸ್ಕ್‌ ಖರೀದಿಸಬಹುದು. ಇಲಾಖೆಯ ಅಧಿಕಾರಿಗಳಿಗೂ ಬಟ್ಟೆಯ ಮಾಸ್ಕ್‌ ನೀಡುತ್ತೇವೆ. ಮಾರಾಟದಿಂದ ಬಂದ ಹಣವನ್ನೇ ಮತ್ತಷ್ಟು ಮಾಸ್ಕ್‌ ತಯಾರಿಗೆ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಉ ಉಪ ನಿರ್ದೇಶಕಿ ಟಿ.ಎಸ್‌.ಆರುಂಧತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರಂಭದಲ್ಲಿ 10 ಸಾವಿರ ಮಾಸ್ಕ್‌ ಮಾತ್ರ ತಯಾರಿ ಮಾಡಲು ನಿರ್ಧರಿಸಲಾಗಿದೆ. ಬೇಡಿಕೆ ಬಂದರೆ, ಮತ್ತಷ್ಟು ಮುಖಗವಸು ತಯಾರಿ ಮಾಡುತ್ತೇವೆ. ಮಡಿಕೇರಿಯಲ್ಲಿ ಬಟ್ಟೆ ಲಭ್ಯವಾಗುತ್ತಿಲ್ಲ. ಮೈಸೂರಿನಿಂದ‌ ತರಿಸಿಕೊಳ್ಳುತ್ತಿದ್ದೇವೆ. ಕೆಲವು ಸಂಘಟನೆಗಳು ಉಚಿತವಾಗಿ ಮಾಸ್ಕ್‌ ತಯಾರಿ ಮಾಡಿಕೊಟ್ಟರೆ, ಇನ್ನು ಕೆಲವು ಸದಸ್ಯರಿಗೆ ಪ್ರತಿ ಮಾಸ್ಕ್‌ಗೆ ₹ 5 ನೀಡಲಾಗುವುದು. ಜಿಲ್ಲಾಡಳಿತವು ಅನುದಾನ ನೀಡಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT