ನಕಲಿ ಬಂಗಾರ ನೀಡಿ ವಂಚನೆ: 16 ದಿನಗಳಲ್ಲಿ ಶಿಕ್ಷೆ

7

ನಕಲಿ ಬಂಗಾರ ನೀಡಿ ವಂಚನೆ: 16 ದಿನಗಳಲ್ಲಿ ಶಿಕ್ಷೆ

Published:
Updated:

ಮೊಳಕಾಲ್ಮುರು: ತಾಲ್ಲೂಕಿನ ಸಿದ್ದಯ್ಯನಕೋಟೆ ಬಳಿ ಈಚೆಗೆ ನಡೆದ ನಕಲಿ ಬಂಗಾರ ಮಾರಾಟ ಪ್ರಕರಣದ ಆರೋಪಿಗಳಿಗೆ ಸ್ಥಳೀಯ ಸಿವಿಲ್‌ ನ್ಯಾಯಾಲಯ ಕೇವಲ 16 ದಿನಗಳಲ್ಲಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದೆ.

ನೆರೆಯ ಸೀಮಾಂಧ್ರದ ಚಿಟ್ಟಿಬಾಬು ಅವರಿಗೆ ಬುನಾದಿ ತೆಗೆಯುವಾಗ 3 ಕೆ.ಜಿ ಅಸಲಿ ಬಂಗಾರ ಸಿಕ್ಕಿದೆ ಎಂದು ಆರೋಪಿಗಳಾದ ಸೋಮಣ್ಣ, ಮಂಜ, ರಾಮಣ್ಣ, ರವಿನಾಯಕ ಹಾಗೂ ಮಾರಣ್ಣ ಅವರು ನಂಬಿಸಿದ್ದರು. ಅದರಂತೆ ನಕಲಿ ಬಂಗಾರ ನೀಡುವಾಗ ಜುಲೈ 25ರಂದು ಪಿಎಸ್‌ಐಗಳಾದ ವೆಂಕಟೇಶ್‌ ರೆಡ್ಡಿ ಹಾಗೂ ಮಂಜುನಾಥ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀಶೈಲ ಭೀಮಸೇನಾ ಬಾಗಡಿ, ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹ 10 ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ ಮತ್ತೆ ಆರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಜಿ. ಲಿಂಗೇಶ್ವರ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !