ಶನಿವಾರ, ಜನವರಿ 25, 2020
28 °C

ಹಲ್ಲಿ ಮಾರಾಟಕ್ಕೆ ಯತ್ನ; ಆರು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹಲವೆಡೆ ಹಲ್ಲಿಗಳನ್ನು ಹಿಡಿದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಹೊಸೂರಿನ ಕರ್ಣ, ಶಕ್ತಿ, ರೆಡ್ಡಿ, ರಮೇಶ್, ಮಲೈರಾಜ್ ಹಾಗೂ ಗೋಪಿ ಬಂಧಿತರು. ಅವರಿಂದ 10 ಹಲ್ಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹಲ್ಲಿ ಮಾಂಸಕ್ಕೆ ಕೆಲವರಿಂದ ಬೇಡಿಕೆ ಇದೆ. ಹೀಗಾಗಿ ಆರೋಪಿಗಳು ಹಲ್ಲಿಗಳನ್ನು ಹಿಡಿದು ಬ್ಯಾಗ್‌ನಲ್ಲಿ ಹಾಕಿಕೊಂಡು ಸೇಂಟ್‌ ಜಾನ್ಸ್‌ ಆಸ್ಪತ್ರೆ ಬಳಿ ಬಂದಿದ್ದರು. ಗ್ರಾಹಕರಿಗಾಗಿ ಕಾಯುತ್ತ ನಿಂತಿದ್ದರು. ಅದೇ ಸಂದರ್ಭದಲ್ಲೇ ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಯಿತು’ ಎಂದರು. 

ಪ್ರತಿಕ್ರಿಯಿಸಿ (+)