ರಾಜಕಾರಣಿಗಳು ವಿರೋಧಿಗಳ ಸಾವು ಬಯಸುವಷ್ಟು ಅಧೋಗತಿಗೆ ಇಳಿಯಬಾರದು: ಸಿದ್ದರಾಮಯ್ಯ

7

ರಾಜಕಾರಣಿಗಳು ವಿರೋಧಿಗಳ ಸಾವು ಬಯಸುವಷ್ಟು ಅಧೋಗತಿಗೆ ಇಳಿಯಬಾರದು: ಸಿದ್ದರಾಮಯ್ಯ

Published:
Updated:

ಬೆಂಗಳೂರು: ‘ವಿರೋಧಿಗಳ ಸಾವು ಬಯಸುವಷ್ಟು ರಾಜಕಾರಣಿಗಳು ಅಧೋಗತಿಗೆ ಇಳಿಯಬಾರದು. ಈ ದುರ್ಬುದ್ದಿ ಬಿಜೆಪಿ ರಕ್ತದಲ್ಲಿದೆ. ಹಿಂದೆ ಜನಾರ್ಧನ ರೆಡ್ಡಿ ನನ್ನ ಕುಟುಂಬದ ಬಗ್ಗೆ ಹೇಳಿದ್ದ ಮಾತನ್ನೇ ಈಗ ರಾಜ್ಯ ಬಿಜೆಪಿ ನಾಯಕರು ದೇವೇಗೌಡ ಕುಟುಂಬದ ಬಗ್ಗೆ ಹೇಳಿದ್ದಾರೆ. ಇದು ಖಂಡನೀಯ ನಡವಳಿಕೆ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

* ಇದನ್ನೂ ಓದಿ: ಹಾಸನ: ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್‌ ಕಾರ್ಯಕರ್ತರಿಂದ ಕಲ್ಲು ತೂರಾಟ

ಮತ್ತೊಂದು ಟ್ವಿಟ್‌ ಮಾಡಿರುವ ಅವರು, ‘'ಆಪರೇಷನ್ ಕಮಲ'ದ ಅಡಿಯೋ‌ ಸಂಭಾಷಣೆ ಆಘಾತಕಾರಿಯಾಗಿದೆ.  ಇಡೀ ದೇಶದ ಮುಂದೆ ರಾಷ್ಟ್ರೀಯ ಬಿಜೆಪಿ ಬಣ್ಣ ಬಯಲಾಗಿದೆ. ಸ್ವಚ್ಛ ರಾಜ್ಯ ಬಿಜೆಪಿ ಸಜ್ಜನರು, ಸಂಘ ಪರಿವಾರದ ಸಂಸ್ಕೃತಿ ರಕ್ಷಕರು ಯಾವ ಬಿಲದಲ್ಲಿ ಅಡಗಿದ್ದಾರೆ?’ ಎಂದು ಟೀಕಿಸಿದ್ದಾರೆ.

‘ದೇವೇಗೌಡರಿಗೆ ವಯಸ್ಸಾಯಿತು, ಕುಮಾರಸ್ವಾಮಿಗೆ ಆರೋಗ್ಯ ಸರಿ ಇಲ್ಲ. ಇಬ್ಬರೂ ಹೋದರೆ ಪಕ್ಷಕ್ಕೆ ಉಳಿಗಾಲ ಇಲ್ಲ’ ಎಂದು ಪ್ರೀತಂ ಗೌಡ ಮಾತನಾಡಿರುವುದು ಆಡಿಯೊದಲ್ಲಿದೆ. ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಜತೆಗೆ ಇದೇ ವಿಷಯನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಕಾರ್ಯಕರ್ತರು ಪ್ರೀತಂ ಗೌಡ ನಿವಾಸದ ಎದುರು ಇಂದು ಪ್ರತಿಭಟನೆಯನ್ನೂ ಮಾಡಿದ್ದಾರೆ. ಈ ವೇಳೆ ಬಿಜೆಪಿಯ ಕಾರ್ಯಕರ್ತನಿಗೆ ಕಲ್ಲೇಟು ಬಿದ್ದು, ಗಾಯಗೊಂಡಿದ್ದಾರೆ. 
 

ಬರಹ ಇಷ್ಟವಾಯಿತೆ?

 • 23

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !