ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 29–5–1968

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಇಂದು ವೀರೇಂದ್ರ ಪಾಟೀಲ್ ಸಂಪುಟದ ಪ್ರಮಾಣವಚನ ಸ್ವೀಕಾರ: ಮುಖ್ಯಮಂತ್ರಿಗೆ ಗೃಹ ಖಾತೆ

ಬೆಂಗಳೂರು, ಮೇ 28– ಹನ್ನೆರಡು ಮಂದಿ ಸಚಿವರು, ನಾಲ್ಕುಮಂದಿ ಸ್ಟೇಟ್ ಸಚಿವರು ಹಾಗೂ ಹದಿಮೂರು ಮಂದಿ ಉಪ ಸಚಿವರಿರುವ ರಾಜ್ಯದ ನೂತನ ಮಂತ್ರಿ ಮಂಡಲ ಶ್ರೀ ವೀರೇಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ ರಾಜಭವನದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸುವುದು. ನೂತನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಗೃಹ ಖಾತೆಯನ್ನು ಇಟ್ಟುಕೊಳ್ಳುವರೆಂದು ತಿಳಿದು ಬಂದಿದೆ.

ಕ್ರೀಡೆಗೆ ಒಬ್ಬ ಪ್ರತ್ಯೇಕ ಮಂತ್ರಿ

ಬೆಂಗಳೂರು, ಮೇ 28– ಶ್ರೀ ವೀರೇಂದ್ರ ಪಾಟೀಲರ ಸಚಿವ ಸಂಪುಟದಲ್ಲಿ ‘ಯುವಜನ, ಸಾಂಸ್ಕೃತಿಕ ವಿಷಯ ಮತ್ತು ಕ್ರೀಡೆ’ಗಳಿಗಾಗಿ ಪ್ರತ್ಯೇಕ ಮಂತ್ರಿ ಶಾಖೆಯೊಂದು ನಿರ್ಮಾಣವಾಗಲಿದೆ.

ಯುವಜನಾಂಗದ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗಾಗಿ ಕೈಗೊಳ್ಳಲಾಗುತ್ತಿರುವ ಪಾಠೇತರ ರಚನಾತ್ಮಕ ಕಾರ್ಯಕ್ರಮಗಳ ಸಮನ್ವಯ ಹಾಗೂ ನಿರ್ದೇಶನ ಹೊಣೆ ಇರುವ ಈ ಸಚಿವ ಶಾಖೆಗೆ, ಸಾಕಷ್ಟು ಪ್ರಧಾನ್ಯ ಎಂದು ತಿಳಿದು ಬಂದಿದೆ.

19 ಜಿಲ್ಲೆಗಳಲ್ಲಿ 17ಕ್ಕೆ ಪ್ರಾತಿನಿಧ್ಯ

ಬೆಂಗಳೂರು, ಮೇ 28– ನಾಳೆ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಮಂತ್ರಿ ಮಂಡಲದಲ್ಲಿ ರಾಜ್ಯದ 19 ಜಿಲ್ಲೆಗಳಲ್ಲಿ 17 ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರಕಿದೆ.

ಮತ್ತೆ ಮೈಸೂರಿನ ರಾಜಕಾರಣಕ್ಕೆ ಬರುವ ಭರವಸೆ ಎಸ್ಸೆನ್‌ಗಿಲ್ಲ

ಬೆಂಗಳೂರು, ಮೇ 28– ತಾವು ಮತ್ತೆ ಮೈಸೂರು ರಾಜ್ಯದ ರಾಜಕಾರಣಕ್ಕೆ ಬರುವ ಬಗ್ಗೆ ತಮಗೆ ನಂಬಿಕೆ ಇಲ್ಲವೆಂದು ನಾಳೆ ಮುಖ್ಯಮಂತ್ರಿ ಸ್ಥಾನದಿಂದ ನಿವೃತ್ತರಾಗಲಿರುವ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT