ಶುಕ್ರವಾರ, ನವೆಂಬರ್ 15, 2019
22 °C
ಕನ್ನಡ ಮತ್ತು ಸಂಸ್ಕೃತಿ ಸಚಿವ

ಅಕಾಡೆಮಿಗಳಿಗೆ ಬಾಕಿ ಸದಸ್ಯರ ನೇಮಕ ಶೀಘ್ರ: ಸಿ.ಟಿ. ರವಿ ಮಾಹಿತಿ

Published:
Updated:
Prajavani

ಬೆಂಗಳೂರು: ‘ಕರ್ನಾಟಕ ರಾಜ್ಯ ಅಕಾಡೆಮಿಗಳ ನಿಯಮಾವಳಿ ಅನುಸಾರ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಉಳಿದ ಸದಸ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ. 

ಸರ್ಕಾರ 13 ಅಕಾಡೆಮಿ ಹಾಗೂ 3 ಪ್ರಾಧಿಕಾರಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿದೆ. ನಿಯಮಗಳ ಪ್ರಕಾರ, ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳಿಗೆ ತಲಾ 15 ಮಂದಿ ಸದಸ್ಯರಿರಬೇಕು.  6ರಿಂದ 13ರ ವರೆಗೆ ವಿಭಿನ್ನ ಸಂಖ್ಯೆಯಲ್ಲಿ ಸದಸ್ಯರನ್ನು ನೇಮಿಸಲಾಗಿದೆ. ಇದರಿಂದ ಸರ್ಕಾರ ನಿಯಮಾವಳಿ ಉಲ್ಲಂಘಿಸಿತೇ ಎಂಬ ಪ್ರಶ್ನೆ ಸಾಂಸ್ಕೃತಿಕ ವಲಯದಲ್ಲಿ ಕೇಳಿಬರುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ, ‘ಈ ಹಿಂದೆ ಅಧ್ಯಕ್ಷರನ್ನು ಮಾತ್ರ ನೇಮಿಸಿ, ನಂತರ ಸದಸ್ಯರನ್ನು ನೇಮಿಸಿದ ಉದಾಹರಣೆಗಳಿವೆ. ನಾವು ಹೀಗೆ ಮಾಡಿಲ್ಲ. ಜಿಲ್ಲಾವಾರು ಪ್ರಾತಿನಿಧ್ಯ ನೀಡಲು ಸದಸ್ಯರ ನೇಮಕಾತಿಯನ್ನು ಪೂರ್ಣಗೊಳಿಸಿಲ್ಲ. ಯಾವ ಜಿಲ್ಲೆಗೆ ಆದ್ಯತೆ ಸಿಕ್ಕಿಲ್ಲ ಎಂದು ಪರಿಶೀಲಿಸಿ, ಉಳಿದ ಸದಸ್ಯರನ್ನು ನೇಮಿಸುತ್ತೇವೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)