ಬುಧವಾರ, ಆಗಸ್ಟ್ 21, 2019
27 °C

ಕಾರು ಡಿಕ್ಕಿ; ಕರ್ತವ್ಯನಿರತ ಪಿಎಸ್‌ಐ ಸಾವು

Published:
Updated:
Prajavani

ಚನ್ನಮ್ಮನ ಕಿತ್ತೂರು: ಪ್ರವಾಹ ಸಂದರ್ಭದಲ್ಲಿ ವಾಹನ ಸಂಚಾರ ನಿಯಂತ್ರಿಸುತ್ತಿದ್ದ ಇಲ್ಲಿನ ಪಿಎಸ್‌ಐ ವೀರಣ್ಣ ಎಸ್‌.ಲಟ್ಟಿ (48) ಅವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಟಗಿ ಕ್ರಾಸ್‌ ಬಳಿ ಮಂಗಳವಾರ ಈ ಘಟನೆ ನಡೆದಿದೆ.

‘ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಸೇತುವೆಯ ಮೇಲೆ ವಾಹನ ಹೋಗದಂತೆ ಅವರು ನಿಯಂತ್ರಿಸುತ್ತಿದ್ದರು. ಬೆಳಗಾವಿಯಿಂದ ಧಾರವಾಡ ಕಡೆ ಹೊರಟಿದ್ದ ವಾಹನಗಳನ್ನು ಸರ್ವೀಸ್‌ ರಸ್ತೆಯ ಮೂಲಕ ಕಳುಹಿಸುತ್ತಿದ್ದರು. ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

Post Comments (+)