‘ಏರೋ ಇಂಡಿಯಾಕ್ಕೆ ವಿವಿಧ ರಾಜ್ಯಗಳಿಂದ ಬೇಡಿಕೆ’

7

‘ಏರೋ ಇಂಡಿಯಾಕ್ಕೆ ವಿವಿಧ ರಾಜ್ಯಗಳಿಂದ ಬೇಡಿಕೆ’

Published:
Updated:

ಬೆಂಗಳೂರು: ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನವನ್ನು ತಮ್ಮಲ್ಲಿ ಆಯೋಜಿಸುವಂತೆ ಹಲವು ರಾಜ್ಯಗಳು ಬೇಡಿಕೆ ಮುಂದಿಟ್ಟಿವೆ ಎಂದು ಹೇಳುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಬೇರೆಡೆಗೆ ಪ್ರದರ್ಶನವನ್ನು ಸ್ಥಳಾಂತರಿಸುವ ಸುಳಿವು ನೀಡಿದರು.

ಏರೋ ಇಂಡಿಯಾ ಪ್ರದರ್ಶನವನ್ನು ಉತ್ತರಪ್ರದೇಶದ ಲಖನೌಗೆ ಸ್ಥಳಾಂತರಿಸುವ ವದಂತಿ ಹಬ್ಬಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪ್ರಸಕ್ತ ವರ್ಷ ಎಲ್ಲಿ ಮತ್ತು ಯಾವಾಗ ಈ ಪ್ರದರ್ಶನ ನಡೆಸಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಕ್ಷಣಾ ಸಾಮಗ್ರಿಗಳ ಪ್ರದರ್ಶನ ಮೇಳವನ್ನು 10 ವರ್ಷ ದೆಹಲಿಯಲ್ಲಿ ಆಯೋಜಿಸಿದ ಬಳಿಕ ಗೋವಾ ಮತ್ತು ಚೆನ್ನೈನಲ್ಲಿ ನಡೆಸಲಾಗಿದೆ ಎಂದರು.

ಈ ವೇಳೆ ಜೊತೆಗಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬೆಂಗಳೂರಿನಲ್ಲೇ ಏರೋ ಇಂಡಿಯಾ ನಡೆಸುವಂತೆ ಒತ್ತಾಯಿಸಿದರು.

‘ತಮ್ಮ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಅವರು ಈ ಬಗ್ಗೆ ತೀರ್ಮಾನಿಸಲಿದ್ದಾರೆ. ಅಲ್ಲಿಯವರೆಗೆ ಕಾಯೋಣ’ ಎಂದು ಮುಖ್ಯಮಂತ್ರಿ ಹೇಳಿದರು.

ಅವಕಾಶ ನೀಡುವುದಿಲ್ಲ

ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಅಧಿಕಾರ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೆ ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆ ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಗಡಿ ರಕ್ಷಣೆ ಮತ್ತು ಒಳ ನುಸುಳುವಿಕೆ ತಡೆಯಲು ರಕ್ಷಣಾ ಮಂತ್ರಿಯಾಗಿ ನಾನಿದ್ದೇನೆ. ಅಂಥ ಯಾವುದೇ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !