ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ, ಅವರಿಗೂ ಬದುಕುವ ಹಕ್ಕಿದೆ: ಅನಂತಕುಮಾರ ಹೆಗಡೆ

7

ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ, ಅವರಿಗೂ ಬದುಕುವ ಹಕ್ಕಿದೆ: ಅನಂತಕುಮಾರ ಹೆಗಡೆ

Published:
Updated:

ಶಿರಸಿ: ‘ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ. ಸಮಾಜದಲ್ಲಿ ಅವರಿಗೂ ಬದುಕುವ ಹಕ್ಕು ಇದೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಸಲಿಂಗಕಾಮದ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ ಅವರು, ‘ಮಾನವೀಯ ನೆಲೆಗಟ್ಟಿನಲ್ಲಿ ತೀರ್ಪನ್ನು ಪರಾಮರ್ಶಿಸಬೇಕು. ಸಲಿಂಗಿಗಳು ಕೂಡ ನಮ್ಮ-ನಿಮ್ಮಂತೆ ಮನುಷ್ಯರಾಗಿದ್ದಾರೆ. ಸಲಿಂಗಕಾಮವನ್ನು ಜಗತ್ತಿನಿಂದ ಅಳಿಸಿಹಾಕಲು ಸಾಧ್ಯವಿಲ್ಲ. ಎಲ್ಲರಂತೆ ಅವರಿಗೂ ಬದುಕಲು ಅವಕಾಶ ನೀಡಬೇಕು’ ಎಂದರು.

‘ಸಮುದಾಯದ ಮಧ್ಯೆ ಬದುಕುತ್ತಿರುವ ಸಲಿಂಗಿಗಳೆಡೆಗೆ ಪ್ರೀತಿ, ಮಮಕಾರ ಬೇಕು’ ಎಂದು ಹೇಳಿದರು.

ತಾಲ್ಲೂಕಿನ ಸೋಂದಾದ ಹುಣಸೆಹೊಂಡದಲ್ಲಿ ನಡೆದ 'ಸ್ವಚ್ಛತಾ ಹೀ ಸೇವಾ' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !