ಶುಕ್ರವಾರ, ಅಕ್ಟೋಬರ್ 18, 2019
24 °C

ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಕುಂಬ್ಳೆ

Published:
Updated:
Prajavani

ಗೋಕರ್ಣ: ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಪತ್ನಿ ಚೇತನಾ ಅವರೊಂದಿಗೆ ಭಾನುವಾರ ಗೋಕರ್ಣಕ್ಕೆ ಭೇಟಿ ನೀಡಿ, ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪಂಚಾಮೃತ, ನವಧಾನ್ಯ, ರುದ್ರಾಭಿಷೇಕದ ಪೂಜೆ ಸಲ್ಲಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯವರು ಪೂಜಾ ಕಾರ್ಯದ ವ್ಯವಸ್ಥೆ ಮಾಡಿಕೊಟ್ಟರು. ಬಳಿಕ ಅವರು ಸಂಬಂಧಿಕರ ಪಿತೃ ಕಾರ್ಯದಲ್ಲಿ ಪಾಲ್ಗೊಂಡರು. ಕ್ಷೇತ್ರ ಪುರೋಹಿತರಾದ ವೇ. ಲಕ್ಷ್ಮೀನಾರಾಯಣ ಅಡಿ ಹಾಗೂ ವೇ. ರಾಮಮೋಹನ ಅಡಿಗ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Post Comments (+)