ಎಪಿಸಿ ಪರೀಕ್ಷೆ: ಅರ್ಜಿ ಸಲ್ಲಿಸಲು 30ರ ಗಡುವು

7
ರೈಲು ವಿಳಂಬ: ಎಪಿಸಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ

ಎಪಿಸಿ ಪರೀಕ್ಷೆ: ಅರ್ಜಿ ಸಲ್ಲಿಸಲು 30ರ ಗಡುವು

Published:
Updated:

ಹುಬ್ಬಳ್ಳಿ: ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ವಿಳಂಬವಾಗಿದ್ದರಿಂದ, ಆ. 5ರಂದು ಬೆಂಗಳೂರಿನಲ್ಲಿ ನಡೆದ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ, ಪರೀಕ್ಷೆ ಬರೆಯಲು ಪೊಲೀಸ್‌ ನೇಮಕಾತಿ ಪ್ರಾಧಿಕಾರ ಅನುಮತಿ ನೀಡಿದೆ.

ಅವಕಾಶ ವಂಚಿತರಾದವರು ಪ್ರಯಾಣದ ಟಿಕೆಟ್‌ನ ಪ್ರತಿಯನ್ನು ಅರ್ಜಿ ನಮೂನೆ ಜತೆ ಲಗತ್ತಿಸಿ, ನೋಂದಣಿ ಸಂಖ್ಯೆ, ಅರ್ಜಿ ಸಂಖ್ಯೆ, ಪರೀಕ್ಷಾ ಕೇಂದ್ರದ ಹೆಸರು, ಪ್ರಯಾಣಿಸಿದ ದಿನಾಂಕ ಹಾಗೂ ಮೊಬೈಲ್‌ ಸಂಖ್ಯೆ ಭರ್ತಿ ಮಾಡಬೇಕು. ಈ ಅರ್ಜಿಯನ್ನು ಅಡಿಷನಲ್‌ ಡೈರೆಕ್ಟರ್‌ ಜನರಲ್‌ ಆಫ್ ಪೊಲೀಸ್‌ (ನೇಮಕಾತಿ), ಕಾರ್ಲ್‌ಟನ್‌ ಭವನ, ಅರಮನೆ ರಸ್ತೆ, ಬೆಂಗಳೂರು ಈ ವಿಳಾಸಕ್ಕೆ ಆ. 30ರೊಳಗಾಗಿ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !