ಸೋಮವಾರ, ಆಗಸ್ಟ್ 19, 2019
21 °C

ವಿಜಯಲಕ್ಷ್ಮಿ ಸರೂರ ಹತ್ಯೆ ಯತ್ನ

Published:
Updated:

ಬಾಗಲಕೋಟೆ: ಮಾಜಿ ಸಚಿವ ಎಚ್‌.ವೈ. ಮೇಟಿ ಅವರ ಲೈಂಗಿಕ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದ ಇಲ್ಲಿನ ಜಿಲ್ಲಾ ಆಯುರ್ವೇದ ಆಸ್ಪತ್ರೆಯ ಉದ್ಯೋಗಿ ವಿಜಯಲಕ್ಷ್ಮಿ ಸರೂರ ಅವರ ಮೇಲೆ ಶನಿವಾರ ರಾತ್ರಿ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಅವರನ್ನು ನವನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಲಕ್ಷ್ಮಿ ಅವರ ನವನಗರದ ಸೆಕ್ಟರ್‌ ನಂ. 42ರಲ್ಲಿರುವ ಅವರ ನಿವಾಸದಲ್ಲಿ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅವರ ಸಂಬಂಧಿಕರೊಬ್ಬರು ಮನೆಯಲ್ಲಿದ್ದರು.

Post Comments (+)